Home ಬೆಂಗಳೂರು ಸಾಯುವ ಒಳಗಾಗಿ ಕಳಸಾ-ಬಂಡೂರಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುವುದಾಗಿ ಶಪಥ –  ಹೆಚ್​​.ಡಿ ದೇವೇಗೌಡ

ಸಾಯುವ ಒಳಗಾಗಿ ಕಳಸಾ-ಬಂಡೂರಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುವುದಾಗಿ ಶಪಥ –  ಹೆಚ್​​.ಡಿ ದೇವೇಗೌಡ

0

ಬೆಂಗಳೂರು : ರಾಜ್ಯದ ನೀರಾವರಿ ಸಮಸ್ಯೆಯ ಬಿಕ್ಕಟ್ಟು ಬಗ್ಗೆ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಅವರು ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ತಾವು ಸಾಯುವ ಒಳಗಾಗಿ ಕಳಸಾ-ಬಂಡೂರಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುವುದಾಗಿ ಶಪಥ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ-ಬಂಡೂರಿ ಯೋಜನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಸದ್ಯ ಈ ಯೋಜನೆ ಪ್ರಕರಣ ಕೋರ್ಟ್​​ನಲ್ಲಿ ವಿಚಾರಣೆ ಹಂತದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಪ್ರಧಾನಿ ಅವರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಅಸಾಧ್ಯ ಎಂದರು.

ಕೇಂದ್ರ ಸರ್ಕಾರದ ಗೋದಾವರಿ-ಕಾವೇರಿ ಪೆನ್ನಾರ್​​ ನದಿ ಜೋಡಣೆ ಯೋಜನೆಯನ್ನು ಪ್ರಸ್ತಾಪಿಸಿರುವ ದೇವೇಗೌಡರು, ರಾಜ್ಯಕ್ಕೆ ಕಡಿಮೆ ನೀರು ಹಂಚಿಕೆ ಆತಂಕವಿದೆ. ರಾಜ್ಯದ ನೀರಿನ ಪಾಲಿಗಾಗಿ ಹೋರಾಟ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ನಾನು ಇನ್ನೂ ನಾಲ್ಕರಿಂದ 6 ವರ್ಷ ಬದುಕಿರುತ್ತೀನಿ. ಅಲ್ಲಿಯವರೆಗೆ ಈ ಸಮಸ್ಯೆಯನ್ನು ಬಗೆಹರಿಸಲು ಎಲ್ಲರೊಂದಿಗೂ ಹೋರಾಟ ಮಾಡುವೆ ಎಂದ ಅವರು, ಕಳಸಾ-ಬಂಡೂರಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಕಾಗಿಲ್ಲ. ಸಮಸ್ಯೆ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಪ್ರಧಾನಿಯವರ ಗಮನಕ್ಕೆ ಮತ್ತೊಮ್ಮೆ ತರುತ್ತಾರೆ ಎಂದು ತಿಳಿಸಿದರು.

You cannot copy content of this page

Exit mobile version