Home ರಾಜ್ಯ ಕೇರಳ ಬಾರಿ ಮಳೆ 3 ದಿನ ಆರೆಂಜ್ ಅಲರ್ಟ್ – ಕರ್ನಾಟಕಕ್ಕೂ ಮಳೆ

ಕೇರಳ ಬಾರಿ ಮಳೆ 3 ದಿನ ಆರೆಂಜ್ ಅಲರ್ಟ್ – ಕರ್ನಾಟಕಕ್ಕೂ ಮಳೆ

ಕೇರಳ : ನೆರೆ ರಾಜ್ಯ ಕೇರಳದಲ್ಲಿ (Kerala) ಮುಂದಿನ ಮೂರು ದಿನಗಳ ಕಾಲ ಮಳೆಯ ಅಬ್ಬರ (Heavy Rain) ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ (IMD) ವಿವಿಧ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ (Orange Alert) ಘೋಷಿಸಿದೆ.

ಕೇರಳ ಮಾತ್ರವಲ್ಲದೇ ದಕ್ಷಿಣ ಕರ್ನಾಟಕ, ದಕ್ಷಿಣ ತಮಿಳುನಾಡು, ಪುದುಚೇರಿ, ಬಂಗಾಳ ಕೊಲ್ಲಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಸೃಷ್ಟಿಯಾಗಿರುವ ‘ಟೈಫೂನ್ ಡಾಲ್ಫಿನ್’ ಚಂಡಮಾರುತದ ಪರೋಕ್ಷ ಪ್ರಭಾವದಿಂದಾಗಿ ನೈರುತ್ಯ ಮಾನ್ಸೂನ್ ಮಾರುತಗಳು ಶನಿವಾರದವರೆಗೆ ಮತ್ತಷ್ಟು ತೀವ್ರಗೊಳ್ಳಲಿವೆ.

ಆಗಸ್ಟ್ ತಿಂಗಳ ಆರಂಭದಲ್ಲೇ ಕೇರಳದಲ್ಲಿ ವಾಡಿಕೆಗಿಂತ ಭಾರಿ ಪ್ರಮಾಣದ ಮಳೆ ದಾಖಲಾಗಿದೆ. ಆಗಸ್ಟ್ 1 ರಿಂದ 5 ರವರೆಗಿನ ಕೇವಲ 5 ದಿನಗಳಲ್ಲಿ 226 ಮಿ.ಮೀ ಮಳೆಯಾಗಿದ್ದು, ಇದು ಈ ಅವಧಿಯ ಸಾಮಾನ್ಯ ಮಳೆಗಿಂತ (90.6 ಮಿ.ಮೀ) ಶೇಕಡಾ 149 ರಷ್ಟು ಹೆಚ್ಚಾಗಿದೆ. ಲವು ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆಯನ್ನು ಹೆಚ್ಚಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಹವಾಮಾನ ತಜ್ಞರ ಪ್ರಕಾರ, ತಮಿಳುನಾಡು, ಕರ್ನಾಟಕ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಸುಳಿಗಾಳಿ ಹಾಗೂ ಟೈಫೂನ್ ‘ಡಾಲ್ಫಿನ್’ ನ ಪರೋಕ್ಷ ಪ್ರಭಾವದಿಂದ ಮಳೆ ತೀವ್ರಗೊಂಡಿದೆ.  ಟೈಫೂನ್ ಡಾಲ್ಫಿನ್ ನೇರವಾಗಿ ಕೇರಳದ ಮೇಲೆ ಪ್ರಭಾವ ಬೀರದಿದ್ದರೂ, ಅರೇಬಿಯನ್ ಸಮುದ್ರದಿಂದ ತೇವಾಂಶಭರಿತ ಮಾರುತಗಳನ್ನು ಕೇರಳ ಕರಾವಳಿಯತ್ತ ತಳ್ಳುತ್ತಿದ್ದು, ಗುರುವಾರ, ಶುಕ್ರವಾರ ಮತ್ತು ಶನಿವಾರ ಮಳೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ದುರಂತ ನಿರ್ವಹಣಾ ಪ್ರಾಧಿಕಾರ (KSDMA) ಸಂಪೂರ್ಣ ಸಜ್ಜಾಗಿದೆ. ರಾಜ್ಯಾದ್ಯಂತ ಅಗತ್ಯವಿರುವ ಕಡೆಗಳಲ್ಲಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.

You cannot copy content of this page

Exit mobile version