Home ರಾಜ್ಯ ಚಿಕ್ಕಮಗಳೂರು ದತ್ತಪೀಠದಲ್ಲಿ ಭೂಕುಸಿತದ ಭಾರೀ ವಾಹನಗಳ ಸಂಚಾರ ನಿರ್ಬಂಧ

ದತ್ತಪೀಠದಲ್ಲಿ ಭೂಕುಸಿತದ ಭಾರೀ ವಾಹನಗಳ ಸಂಚಾರ ನಿರ್ಬಂಧ

0

ಚಿಕ್ಕಮಗಳೂರು : ಕರ್ನಾಟಕದ ಅಯೋಧ್ಯೆ ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ದತ್ತಪೀಠದಲ್ಲಿ ದತ್ತಜಯಂತಿ (Datta Jayanti) ಸಂಭ್ರಮದ ಹಿನ್ನಲೆ ಐದು ದಿನಗಳ ಕಾಲ ಲಾಂಗ್ ಚಾರ್ಸಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತದಿಂದ ನಿಷೇಧ ಹೇರಲಾಗಿದೆ.

ಇದೇ ನವೆಂಬರ್ 26 ರಿಂದ ಡಿಸೆಂಬರ್ 4ರವರೆಗೆ ದತ್ತಪೀಠದಲ್ಲಿ ನಡೆಯುವ ದತ್ರಜಯಂತಿಯ ಹಿನ್ನಲೆ ಡಿಸೆಂಬರ್ 1 ರಿಂದ 5ರ ವರೆಗೆ 35 ಆಸನಗಳಿಗಿಂತ ಹೆಚ್ಚು ಸೀಟ್ ಇರುವ ಎಲ್ಲಾ ರೀತಿಯ ವಾಹನಗಳಿಗೆ ಸಂಚಾರವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರು ನಿಷೇಧಿಸಿದ್ದಾರೆ. ದತ್ತಭಕ್ತರು ಲಾಂಗ್ ಚಾರ್ಸಿ ವಾಹನ ತಂದರೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ, ಅಲ್ಲದೇ ವರ್ಷಪೂರ್ತಿ ಮಳೆ ಸುರಿದ ಹಿನ್ನಲೆ ಗಿರಿ ಭಾಗದಲ್ಲಿ ಅಲ್ಲಲ್ಲೇ ರಸ್ತೆ ಬದಿ ಮಣ್ಣು ಕುಸಿದಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಲಾಂಗ್ ಚಾರ್ಸಿ ವಾಹನಗಳಿಗೆ ಜಿಲ್ಲಾಡಳಿತದಿಂದ ನಿಷೇಧ ಆದೇಶ ಹೊರಡಿಸಲಾಗಿದೆ. ಇದು ನಿಯಮ ಪೊಲೀಸ್-ಅಗ್ನಿಶಾಮಕ ವಾಹನಗಳಿಗೆ ಈ ಆದೇಶ ಅನ್ವಯವಾಗಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ತಿಳಿಸಿದ್ದಾರೆ.

You cannot copy content of this page

Exit mobile version