Home ರಾಜ್ಯ ಚಿಕ್ಕಮಗಳೂರು ಬಾಬರ್ ಈಗ ಇಲ್ಲದಿರಬಹುದು, ಆದರೆ ಬಾನು ಮುಷ್ತಾಕ್‌ ತರಹದವರು ಇದ್ದಾರೆ, ಹಿಂದೂಗಳು ಎಚ್ಚರದಿಂದ ಇರಬೇಕು: ಪ್ರತಾಪ್...

ಬಾಬರ್ ಈಗ ಇಲ್ಲದಿರಬಹುದು, ಆದರೆ ಬಾನು ಮುಷ್ತಾಕ್‌ ತರಹದವರು ಇದ್ದಾರೆ, ಹಿಂದೂಗಳು ಎಚ್ಚರದಿಂದ ಇರಬೇಕು: ಪ್ರತಾಪ್ ಸಿಂಹ

0

ಚಿಕ್ಕಮಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಾವು ನೀಡಿದ ಹೇಳಿಕೆಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಮುಸ್ಲಿಂ ಸಮುದಾಯದವರನ್ನು ತಾವು ವಿರೋಧಿಸಿಲ್ಲ ಎಂದು ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರು ದಸರಾವು 9 ದಿನಗಳ ಕಾಲ ನಡೆಯುವ ನೂರಕ್ಕೆ ನೂರು ಧಾರ್ಮಿಕ ಕಾರ್ಯಕ್ರಮವಾಗಿದೆ. ಈ ವೇಳೆ ತಾಯಿ ಚಾಮುಂಡೇಶ್ವರಿಗೆ ವಿವಿಧ ಅಲಂಕಾರಗಳು ಮತ್ತು ಪೂಜೆಗಳು ನಡೆಯುತ್ತವೆ. ಆದ್ದರಿಂದಲೇ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದೆ ಎಂದು ಹೇಳಿದರು.

“ಯಾವನೋ ಘಜ್ನಿ, ಅಕ್ಬರ್, ಬಾಬರ್ ಬಂದಿದ್ದ ಅಂತ ಹೇಳಬೇಡಿ. ಬಾಬರ್ ಇಲ್ಲದೆ ಇರಬಹುದು, ಆದರೆ ಮುಷ್ತಾಕ್‌ನಂತಹವರು ನಮ್ಮ ನಡುವೆ ಇದ್ದಾರೆ. ಅದಕ್ಕಾಗಿಯೇ ನಾನು ಈ ಎಚ್ಚರಿಕೆ ನೀಡಲು ಬಂದಿದ್ದೇನೆ” ಎಂದು ಅವರು ಹೇಳಿದರು.

ದೇಶವನ್ನು ಉಳಿಸಿಕೊಳ್ಳಲು ಹಿಂದೂಗಳು ಜಾತಿ ಭೇದಗಳನ್ನು ಮರೆತು ಒಂದಾಗಬೇಕು ಎಂದು ಅವರು ಕರೆ ನೀಡಿದರು. ಮುಸ್ಲಿಂ ಸಮುದಾಯದವರನ್ನು ತಾವು ವಿರೋಧಿಸುವುದಿಲ್ಲ ಎಂಬುದಕ್ಕೆ ಉದಾಹರಣೆಗಳನ್ನು ನೀಡಿದ ಅವರು, “ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಇದೇ ಬಿಜೆಪಿ ಸರ್ಕಾರ. ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತರತ್ನ ನೀಡಿದ್ದು ವಾಜಪೇಯಿ ಸರ್ಕಾರ” ಎಂದು ಹೇಳಿದರು.

You cannot copy content of this page

Exit mobile version