ಪಶ್ಚಿಮ ಸುಡಾನ್ ನ ಎಲ್ ಫಾಶರ್ನಲ್ಲಿ ಅರೆಸೈನಿಕ ಪಡೆ, ಆರ್‌ಎಸ್‌ಎಫ್ ನಡೆಸಿದ ಭೀಕರ ಶೆಲ್ ದಾಳಿಗೆ 68 ರೋಗಿಗಳು ಮತ್ತು ಅವರ ಶುಶ್ರೂಷಕರು ಸಾವನ್ನಪ್ಪಿದ್ದಾರೆ ಮತ್ತು 19 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಉತ್ತರ ಡಾರ್ಫುರ್ನ ಎಲ್ ಫಾಶರ್ನಲ್ಲಿರುವ ಸೌದಿ ಆಸ್ಪತ್ರೆಯ ಮೇಲೆ ಈ ದಾಳಿ ನಡೆದಿದೆ.
ದಾಳಿಯ ಪರಿಣಾಮವಾಗಿ ಆಸ್ಪತ್ರೆಯ ತುರ್ತು ವಿಭಾಗ ಸಂಪೂರ್ಣವಾಗಿ ನಾಶವಾಗಿದೆ. ಅಷ್ಟೇ ಅಲ್ಲದೆ ಅದನ್ನು ಸಂಪೂರ್ಣವಾಗಿ ಸೇವೆಯಿಂದ ಹೊರಗಿಡಬೇಕಾಗಿದೆ ಎಂದು ಸ್ಥಳೀಯ ಸುದ್ದಿ ವಾಹಿನಿ ವರದಿ ಮಾಡಿದೆ.
ಡಾರ್ಫರ್ ಪ್ರದೇಶದ ಗವರ್ನರ್ ಮಿನ್ನಿ ಅರ್ಕೊ ಮಿನ್ನಾವಿ ಆರ್‌ಎಸ್‌ಎಫ್ ದಾಳಿಯನ್ನು ಖಂಡಿಸಿದ್ದಾರೆ. “ಎಲ್ ಫಾಶರ್ ನಿವಾಸಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ಏಕೈಕ ಇಲಾಖೆ ಗುರಿಯಾಗಿದೆ” ಎಂದು ಮಿನ್ನವಿ ಶನಿವಾರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಹೇಳಿದರು.
ಇದಕ್ಕೂ ಮುನ್ನ ಉತ್ತರ ದಾರ್ಫರ್ ರಾಜ್ಯದ ಗ್ರಾಮವೊಂದರ ಮೇಲೆ ಅರೆಸೈನಿಕ ಆರ್‌ಎಸ್‌ಎಫ್ ನಡೆಸಿದ ದಾಳಿಯಲ್ಲಿ ಕನಿಷ್ಠ 18 ನಾಗರಿಕರು ಸಾವನ್ನಪ್ಪಿದ್ದರು ಮತ್ತು ಇತರ ಐದು ಮಂದಿ ಗಾಯಗೊಂಡಿದ್ದರು