Home ರಾಜ್ಯ ಧಾರವಾಡ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಸ್ಥಾಪಿಸಿದರೆ ನಾವು ಬುಡಸಮೇತ ಕಿತ್ತುಹಾಕುತ್ತೇವೆ : ಪ್ರಮೋದ್ ಮುತಾಲಿಕ್

ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಸ್ಥಾಪಿಸಿದರೆ ನಾವು ಬುಡಸಮೇತ ಕಿತ್ತುಹಾಕುತ್ತೇವೆ : ಪ್ರಮೋದ್ ಮುತಾಲಿಕ್

0

ಹುಬ್ಬಳ್ಳಿ: ಮೈಸೂರಿನಲ್ಲಾಗಲಿ ಅಥವಾ ಶ್ರೀರಂಗಪಟ್ಟಣದಲ್ಲಾಗಲಿ ಟಿಪ್ಪು ಸುಲ್ತಾನ್‌ ಪ್ರತಿಮೆಯನ್ನು ಸ್ಥಾಪಿಸುವುದು ಖಚಿತ ಎಂದು ಶಾಸಕ ತನ್ವೀರ್‌ ಸೇಠ್‌ ನೀಡಿದ ಹೇಳಿಕೆಯ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಾಗಲಿ ಅಥವಾ ಶ್ರೀರಂಗಪಟ್ಟಣದಲ್ಲಾಗಲಿ ಟಿಪ್ಪು ಸುಲ್ತಾನ್ ಅವರ 100 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ತನ್ವೀರ್ ಸೇಠ್ ಆಗ್ರಹಿಸಿದ್ದರು. ಇದನ್ನು ವಿರೋಧಿಸಿರುವ ಪ್ರಮೋದ್ ಮುತಾಲಿಕ್, ಒಂದು ವೇಳೆ ಟಿಪ್ಪು ಸುಲ್ತಾನ್‌ ಪ್ರತಿಮೆಯನ್ನು ಸ್ಥಾಪಿಸಿದ್ದೆಯಾದರೆ, ಬಾಬರಿ ಮಸೀದಿಯನ್ನು ಬೇರುಸಹಿತ ಕಿತ್ತುಹಾಕಿದಂತೆಯೇ, ಟಿಪ್ಪು ಸುಲ್ತಾನ್‌ ಪ್ರತಿಮೆಯನ್ನು ಕಿತ್ತುಹಾಕುತ್ತೇವೆ ಎಂದು ಮುತಾಲಿಕ್‌ ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಧಾರ್ಮಿಕ ಮತಾಂಧರಾಗಿದ್ದರು, ಸಾವಿರಾರು ಹಿಂದೂ ದೇವಾಲಯಗಳನ್ನು ನೆಲಸಮ ಮಾಡಿದ್ದರು, ಈ ಕಾರಣ ಟಿಪ್ಪು ಅವರು ಕರ್ನಾಟಕಕ್ಕೆ ಕಳಂಕವಾಗಿದ್ದರು ಎಂದು ಮುತಾಲೀಕ್‌ ದೂರಿದ್ದಾರೆ.

ಈ ಹಿನ್ನಲೆಯಲ್ಲಿ ಮೈಸೂರು ಅರಸರನ್ನು ಅವಮಾನಿಸುವ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸಬಾರದು. ಬದಲಿಗೆ ಭಾರತೀಯ ದಾರ್ಶನಿಕ ಶಿಶುನಾಳ್ ಶರೀಫ್ ಮತ್ತು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪ್ರತಿಮೆಗಳನ್ನು ಸ್ಥಾಪಿಸಿ ಎಂದು ಮುತಾಲಿಕ್‌ ತಿಳಿಸಿದರು.

You cannot copy content of this page

Exit mobile version