Home ವಿದೇಶ ʼಭಾರತದ ಮುಸಲ್ಮಾನರು ನೊಂದಿದ್ದಾರೆʼ- ಅಯತೊಲ್ಲಾ ಖಮೇನಿ: ಇರಾನ್‌ ನಾಯಕನ ಹೇಳಿಕೆ ಒಪ್ಪುವಂತದ್ದಲ್ಲ ಎಂದ ಭಾರತ ಸರ್ಕಾರ

ʼಭಾರತದ ಮುಸಲ್ಮಾನರು ನೊಂದಿದ್ದಾರೆʼ- ಅಯತೊಲ್ಲಾ ಖಮೇನಿ: ಇರಾನ್‌ ನಾಯಕನ ಹೇಳಿಕೆ ಒಪ್ಪುವಂತದ್ದಲ್ಲ ಎಂದ ಭಾರತ ಸರ್ಕಾರ

0
ಅಯತೊಲ್ಲಾ ಖಮೇನಿ ಅವರಿಗೆ ಪಿಎಂ ಮೋದಿ ಕುಫಿಕ್ ಸ್ಕ್ರಿಪ್ಟ್ ಖುರಾನ್ ಉಡುಗೊರೆಯಾಗಿ ನೀಡಿದ ಸಂದರ್ಭ

ಬೆಂಗಳೂರು: ಗಾಜಾ ಮತ್ತು ಮ್ಯಾನ್ಮಾರ್‌ನಲ್ಲಿರುವಂತೆ ಭಾರತದ ಮುಸ್ಲಿಮರೂ “ನೋವಿನಲ್ಲಿದ್ದಾರೆ” ಎಂಬ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹೇಳಿಕೆಯನ್ನು ಭಾರತ ಸರ್ಕಾರವು ಸೆಪ್ಟೆಂಬರ್ 15 ರಂದು “ಇದು ಒಪ್ಪುವಂತದ್ದಲ್ಲ” ಎಂದು ಖಂಡಿಸಿದೆ ಮತ್ತು ಇರಾನ್ ತನ್ನ ದೇಶದ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯ ಕಡೆಗೆ ಗಮನ ಕೊಡುವಂತೆ ಒತ್ತಾಯಿಸಿದೆ.

ಟೆಹ್ರಾನ್‌ನಲ್ಲಿ ಇಸ್ಲಾಮಿಕ್ ವಿದ್ವಾಂಸರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಖಮೇನಿ ಇಸ್ಲಾಮಿನ ವಿಶ್ವ ಸಹೋದರತ್ವದ ಬಗ್ಗೆ ಮಾತನಾಡಿ, ಇದು ಮುಸ್ಲಿಮರು ಇತರರಿಂದ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಫಾರ್ಸಿಯಲ್ಲಿರುವ ಈ ಭಾಷಣವನ್ನು ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆಯ್ದ ಭಾಗವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 

“ಇಸ್ಲಾಮಿನ ಶತ್ರುಗಳು ಯಾವಾಗಲೂ ನಮ್ಮ ಇಸ್ಲಾಮಿಕ್ ಉಮ್ಮಾ ಎಂಬ ನಮ್ಮ ಗುರುತಿನ ಬಗ್ಗೆ ಅಸಡ್ಡೆಯನ್ನು ಹೊಂದಿದ್ದಾರೆ. ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸಲ್ಮಾನನೊಬ್ಬ ಅನುಭವಿಸುತ್ತಿರುವ ನೋವನ್ನು ನಾವು ನಿರ್ಲಕ್ಷಿಸಿದರೆ ನಾವು ನಮ್ಮನ್ನು ಮುಸ್ಲಿಮರು ಎಂದು ಪರಿಗಣಿಸಲು ಸಾಧ್ಯವಿಲ್ಲ,” ಎಂದು ಎಕ್ಸ್ ಪೋಸ್ಟ್ ಹೇಳಿದೆ .

ಕೆಲವು ಗಂಟೆಗಳ ನಂತರ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಇರಾನ್ ನಾಯಕನ ಹೇಳಿಕೆಗಳನ್ನು ಟೀಕಿಸಿದರು.

ಭಾರತದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಇರಾನ್‌ನ ಸರ್ವೋಚ್ಚ ನಾಯಕ ನೀಡಿರುವ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ತಪ್ಪು ಮಾಹಿತಿ ಮತ್ತು ಸ್ವೀಕಾರಾರ್ಹವಲ್ಲ. ಅಲ್ಪಸಂಖ್ಯಾತರ ಬಗ್ಗೆ ಕಾಮೆಂಟ್ ಮಾಡುವ ದೇಶಗಳು ಇತರರ ಬಗ್ಗೆ ಯಾವುದೇ ಅವಲೋಕನ ಮಾಡುವ ಮೊದಲು ತಮ್ಮದೇ ಆದ ಸ್ಥಿತಿಯನ್ನು ನೋಡಿಕೊಳ್ಳುವಂತೆ ನಾವು ಸಲಹೆ ನೀಡುತ್ತೇವೆ,” ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಭಾರತವು ಇರಾನ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ, ಟೆಹ್ರಾನ್‌ ಚಾಬಹಾರ್‌ನ ಆಯಕಟ್ಟಿನ ಬಂದರಿನಲ್ಲಿ ಕೆಲಸ ಮಾಡುತ್ತಿದೆ. ಈ ವರ್ಷದ ಮೇನಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಉಪರಾಷ್ಟ್ರಪತಿ ಭಾಗವಹಿಸಿದ್ದರು. ಜುಲೈನಲ್ಲಿ ನೂತನವಾಗಿ ಚುನಾಯಿತರಾದ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಹಿರಿಯ ಸಚಿವರೊಬ್ಬರು ಭಾರತವನ್ನು ಪ್ರತಿನಿಧಿಸಿದ್ದರು .

ಬಲವಾದ ಸಂಬಂಧಗಳ ಹೊರತಾಗಿಯೂ, ಇರಾನಿನ ಸುಪ್ರೀಂ ಲೀಡರ್ ಭಾರತದಲ್ಲಿರುವ ಮುಸ್ಲಿಮರ ಪರಿಸ್ಥಿತಿ ಮತ್ತು ಕಾಶ್ಮೀರ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು ಇದೇ ಮೊದಲೇನಲ್ಲ.

ಮಾರ್ಚ್ 2020 ರಲ್ಲಿ ದೆಹಲಿ ಗಲಭೆಯ ಸಂದರ್ಭದಲ್ಲಿ ಭಾರತೀಯ ಮುಸ್ಲಿಮರ ಬಗ್ಗೆ, “ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಪ್ರಪಂಚದಾದ್ಯಂತದ ಮುಸ್ಲಿಮರ ಹೃದಯಗಳು ದುಃಖಿಸುತ್ತಿವೆ. ಭಾರತ ಸರ್ಕಾರವು ತೀವ್ರವಾದಿ ಹಿಂದೂಗಳು ಮತ್ತು ಅವರ ಪಕ್ಷಗಳನ್ನು ಎದುರಿಸಬೇಕು ಹಾಗೂ ಇಸ್ಲಾಮಿಕ್‌ ಜಗತ್ತಿನಿಂದ ಭಾರತವನ್ನು ಪ್ರತ್ಯೇಕಿಸುವುದು ಆಗಬಾರದೆಂದರೆ ಮುಸ್ಲಿಮರ ಹತ್ಯಾಕಾಂಡವನ್ನು ನಿಲ್ಲಿಸಬೇಕು,” ಎಂದು ಅಯತೊಲ್ಲಾ ಖಮೇನಿ ಅವರ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.

ಹಿಂಸಾತ್ಮಕ ಗಲಭೆಗಳ ಬಗ್ಗೆ ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಅವರು ಕಳವಳ ವ್ಯಕ್ತಪಡಿಸಿದ ನಂತರ, ಇರಾನ್ ರಾಯಭಾರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಲಾಯಿತು .

ಅಯತೊಲ್ಲಾ ಕಾಶ್ಮೀರದ ಬಗ್ಗೆ ಹೆಚ್ಚು ಆಗಾಗ ಹೇಳಿಕೆಗಳನ್ನು ನೀಡುತ್ತಿದ್ದರು, ಅವರು ಎಂಬತ್ತರ ದಶಕದ ಆರಂಭದಲ್ಲಿ ಭೇಟಿ ತಾವು ನೀಡಿದ್ದ ಕಾಶ್ಮೀರದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಕಾಶ್ಮೀರದ ಬಗ್ಗೆ ಆಗಸ್ಟ್ 2019 ರಂದು ಕೊನೆಯ ಬಾರಿ ಹೇಳಿಕೆ ನೀಡಿದ್ದರು. ಆದರೂ ಅದಕ್ಕೂ ಮೊದಲು ಅವರು ಕಾಶ್ಮೀರಿ ಮುಸ್ಲಿಮರನ್ನು ತುಳಿತಕ್ಕೊಳಗಾದ ಸಮುದಾಯಗಳ ಪಟ್ಟಿಯಲ್ಲಿ  ಸೇರಿಸಿದ್ದಾರೆ.

ನವೆಂಬರ್ 2010 ರಲ್ಲಿ , ಕಾಶ್ಮೀರದ ಕುರಿತು ಅಯತೊಲ್ಲಾ ನೀಡಿದ ಹೇಳಿಕೆಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ತೋರಿಸಲು ಭಾರತ ಸರ್ಕಾರ ಹಂಗಾಮಿ ಇರಾನ್ ರಾಯಭಾರಿಯನ್ನು ಕರೆಸಿತ್ತು. 

You cannot copy content of this page

Exit mobile version