Home ಆಟೋಟ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು!

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು!

0

ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಮಹಿಳೆಯರನ್ನು ಭಾರತ ತಂಡ ಸೋಲಿಸಿದೆ. ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 59 ರನ್‌ಗಳ ಜಯ ಸಾಧಿಸಿತು.

ಸಾಧಾರಣ ಗುರಿಯೊಂದಿಗೆ ಕಣಕ್ಕೆ ಇಳಿದ ಕಿವೀಸ್ 40.4 ಓವರ್ ಗಳಲ್ಲಿ 168 ರನ್ ಗಳಿಗೆ ಆಲೌಟಾಯಿತು. ಎಡಗೈ ಸ್ಪಿನ್ನರ್ ರಾಧಾ ಯಾದವ್ (3/35) ಮತ್ತು ಚೊಚ್ಚಲ ವೇಗಿ ಸೈಮಾ ಠಾಕೋರ್ (2/26) ಯಶಸ್ವಿಯಾದರು. ದೀಪ್ತಿ ಶರ್ಮಾ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರು. ಎರಡನೇ ಏಕದಿನ ಪಂದ್ಯ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 44.3 ಓವರ್‌ಗಳಲ್ಲಿ 227 ರನ್‌ಗಳಿಗೆ ಆಲೌಟ್ ಆಯಿತು. ತೇಜಲ್ ಹಸಾಬ್ನಿಸ್ (42; 64 ಎಸೆತಗಳಲ್ಲಿ 3×4), ದೀಪ್ತಿ ಶರ್ಮಾ (41; 51 ಎಸೆತಗಳಲ್ಲಿ 2×4, 1×6), ಯಾಸ್ತಿಕಾ ಭಾಟಿಯಾ (37; 43 ಎಸೆತಗಳಲ್ಲಿ 5×4), ಜೆಮಿಮಾ ರೋಡ್ರಿಗಸ್ (35; 1×4 36 ಎಸೆತಗಳಲ್ಲಿ 4), ಶೆಫಾಲಿ ವರ್ಮಾ (33; 22 ಎಸೆತಗಳಲ್ಲಿ 5×4, 1×6) ಮಿಂಚಿದರು. ನಾಯಕಿ ಸ್ಮೃತಿ ಮಂಧಾನ (5) ಮತ್ತು ದಯಾಳನ್ ಹೇಮಲತಾ (3) ಹೆಚ್ಚಿನ ರನ್‌ ಪೇರಿಸುವಲ್ಲಿ ವಿಫಲರಾದರು. ಕಿವೀಸ್ ಬೌಲರ್ ಗಳ ಪೈಕಿ ಅಮೆಲಿಯಾ ಕೆರ್ (4/42) ಮತ್ತು ಜೆಸ್ ಕೆರ್ (3/49) ಭಾರತದ ಕಲಿಗಳನ್ನು ಕಟ್ಟಿಹಾಕಿದರು.

ಚೇಸಿಂಗ್‌ನಲ್ಲಿ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ್ತಿ ಸುಜಿ ಬೇಟ್ಸ್ (1) ಬೇಗನೇ ಪೆವಿಲಿಯನ್ ಸೇರಿದರು. ಈ ವೇಳೆ ಜಾರ್ಜಿಯಾ ಪ್ಲಿಮ್ಮರ್ (25) ಹಾಗೂ ಲಾರೆನ್ ಡೌನ್ (26) ತಂಡಕ್ಕೆ ಆಸರೆಯಾಗುವ ಪ್ರಯತ್ನ ಮಾಡಿದರು. ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ಇವರಿಬ್ಬರಿಗೆ ಪೆವಿಲಿಯನ್ ದಾರಿ ತೋರಿಸಿದರು. ಸೋಫಿ ಡಿವೈನ್ (2) ವಿಫಲರಾದರು. ಬ್ರೂಕ್ ಹ್ಯಾಲಿಡೇ (39), ಮ್ಯಾಡಿ ಗ್ರೀನ್ (31) ಮತ್ತು ಅಮೆಲಿಯಾ ಕೆರ್ (ಅಜೇಯ 25) ರನ್ ಗಳಿಸಿದರು ಆದರೆ ಉಳಿದವರ ಕೊಡುಗೆ ಇರಲಿಲ್ಲ. ಭಾರತದ ಬೌಲರ್‌ಗಳಲ್ಲಿ ರಾಧಾ ಯಾದವ್ (3/35) ಮತ್ತು ಸೈಮಾ ಠಾಕೂರ್ (2/26) ಮಿಂಚಿದರು.

You cannot copy content of this page

Exit mobile version