ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಹಾಸನಾಂಬ – 2026, 30 ಲಕ್ಷಕ್ಕೂ ಅಧಿಕ ಭಕ್ತರು; ₹29.55 ಕೋಟಿ ಆದಾಯ ಸಂಗ್ರಹಲಂಚ ಪಡೆಯುತ್ತಿದ್ದಾಗ ರಾಮನಗರ ಉಪ ತಹಶೀಲ್ದಾರ್‌ ಅಂದರ್‌ – ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಧಿಕಾರಿ2022ರ ಮತಾಂತರ ನಿಷೇಧ ಕಾಯ್ದೆಯನ್ನೇ ಮರುಜಾರಿಗೆ ಕಾಂಗ್ರೆಸ್ ಬದ್ಧ: ಬಿ.ಕೆ. ಹರಿಪ್ರಸಾದ್ಕುಮಾರಸ್ವಾಮಿ ನಮಗೇನು ದೊಡ್ಡವರಲ್ಲ, ತಪ್ಪು ಮಾಡಿದರೆ ಶಿಕ್ಷೆಯಾಗಲಿ, ತನಿಖೆ ನಡೆಯಬೇಕು- ಡಿಸಿ ಲತಾಕುಮಾರಿE-ಖಾತಾ ಕಾನೂನು ಉಲ್ಲಂಘನೆ, GBA ಆಯುಕ್ತ ಮಾಗಿ ಹಾಗೂ 31 ಜನರ – ವಿರುದ್ಧ FIR ದಾಖಲುಎಥೆನಾಲ್ ವಿವಾದಕ್ಕೆ ಅಶೋಕ್ ತಿರುಗೇಟು; ಮೈಲೇಜ್ ಇಳಿಕೆಗೆ ರಸ್ತೆ ಗುಂಡಿಗಳೇ ಕಾರಣವೆಂದು ವ್ಯಂಗ್ಯಮಕ್ಕಳಾಗದ ನೋವು ದಾಂಪತ್ಯ ಕಲಹಕ್ಕೆ ಕಾರಣ: ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿ!ಏಳು ಷರತ್ತುಗಳಿಗೆ ಒಪ್ಪಿದರಷ್ಟೇ ಮಾತುಕತೆ: ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ; ಸಂಧಾನಕ್ಕೆ ವ್ಯಾನ್ಸ್ ಪ್ರಯತ್ನಶಿಶುನಾಳ ಶರೀಫರ ತತ್ವಪದಗಳ ಭಾಷಾ ವೈಶಿಷ್ಟ್ಯತೆಸಿಸಿಬಿ ವಿರುದ್ಧ ಕೃಪಾ ಆಳ್ವ ಅಸಮಾಧಾನಸೋನಿಯಾ ಗಾಂಧಿ ಬಗ್ಗೆ ಬಿಜೆಪಿ, ಆರ್‌ಎಸ್‌ಎಸ್‌ ಜೀವನಪೂರ್ತಿ ಸುಳ್ಳುಗಳನ್ನು ಹರಡಿವೆ: ಪ್ರಿಯಾಂಕಾ ಗಾಂಧಿಉತ್ತರ ಪ್ರದೇಶ ಚುನಾವಣೆ: ಓವೈಸಿ–ಚಂದ್ರಶೇಖರ್ ಆಜಾದ್ ಮೈತ್ರಿ ಘೋಷಣೆ; ‘ಸಾಮಾಜಿಕ ಪರಿವರ್ತನಾ ಮೋರ್ಚಾ’ಗೆ ಕಾಂಗ್ರೆಸ್‌, ಎಸ್‌ಪಿಗೂ ಆಹ್ವಾನಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ ರೈಲು ಟಿಕೆಟ್‌ ಬುಕ್ಕಿಂಗ್‌ ಆರಂಭ: ಮಂಗಳೂರು, ಉಡುಪಿ, ಕುಂದಾಪುರದಿಂದ ಪ್ರಯಾಣ ದರವೆಷ್ಟು?ಹಾಸನದ DC ಕಚೇರಿಯಲ್ಲಿ ಕೋಟ್ಯಂತರ ರೂ. ಅಕ್ರಮ: ತನಿಖೆಗೆ ನಡೆಸುವಂತೆ ಶಾಲಿನಿ ರಜನೀಶ್ ಅವರಿಗೆ ದೂರು ವ್ಯಕ್ತಿ ಅಪಹರಿಸಿ 1.15 ಕೋಟಿ ರೂ. ದರೋಡೆ: ಸಂಚಾರ ಪೊಲೀಸ್ ಸಿಬ್ಬಂದಿ ಜೊತೆ – ಐವರ ಬಂಧನಮೆಟ್ರೋ 3 ನಿಲ್ದಾಣಗಳಲ್ಲಿ ಹೆಸರು ಬದಲಾವಣೆ – ಕೇಂದ್ರ ಅನುಮೋದನೆಕನ್ನಡಿಗರ ನಿಜ ಬದುಕಿನ ಸಮಸ್ಯೆಗಳನ್ನು ಪರಿಹರಿಸದೆ ವಿಶ್ವ ಕನ್ನಡ ಸಮ್ಮೇಳನ ನಡೆಸುವುದರಲ್ಲಿ ಅರ್ಥವಿಲ್ಲ: ಕರವೇ ಅಧ್ಯಕ್ಷ ನಾರಾಯಣ ಗೌಡಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಯ ಮೃತದೇಹ ಪತ್ತೆ; ಸೇವಾ ಶಸ್ತ್ರಾಸ್ತ್ರಗಳು ನಾಪತ್ತೆಹಿಂದಿನ ಕಾಲದ ಪಟಾಕಿಗಳು ಕೀಟಗಳನ್ನು ನಾಶಪಡಿಸಿ ವಾತಾವರಣವನ್ನು ಶುದ್ಧಗೊಳಿಸುತ್ತಿದ್ದವು: ಮೋಹನ್‌ ಭಾಗವತ್‌ಇರಾನ್‌ ಯುದ್ಧದ ವಿಚಾರದಲ್ಲಿ ಟ್ರಂಪ್‌–ನೆತನ್ಯಾಹು ನಡುವೆ ಭಿನ್ನಮತ; ದೂರವಾಣಿ ಮಾತುಕತೆಯಲ್ಲಿ ತೀವ್ರ ವಾಗ್ವಾದ

ಎಲ್‌ನಿನೋ ಪರಿಣಾಮ: ಹಬ್ಬದ ಸಮಯದಲ್ಲಿ ಗಗನಕ್ಕೆ ಏರಿ ಕುಳಿತ ದಿನಸಿ ಬೆಲೆಗಳು

ಎಲ್‌ನಿನೊ ಮತ್ತು ದುರ್ಬಲ ಮುಂಗಾರಿನಿಂದ ಭಾರತದಲ್ಲಿ ಆಹಾರ ಹಣದುಬ್ಬರ ಶೇ.10 ತಲುಪುವ ಆತಂಕ. ಸಕ್ಕರೆ, ಅಕ್ಕಿ, ಗೋಧಿ, ಬೇಳೆಕಾಳು, ಹಾಲು ಮತ್ತು ಕೋಳಿ ಮಾಂಸದ ಬೆಲೆ ಏರಿಕೆ ಕುರಿತು ತಜ್ಞರ ಎಚ್ಚರಿಕೆ.

PPeepal Media

Peepal Media ದೇಶ

• 2 ನಿಮಿಷದ ಓದು

ಎಲ್‌ನಿನೋ ಪರಿಣಾಮ: ಹಬ್ಬದ ಸಮಯದಲ್ಲಿ ಗಗನಕ್ಕೆ ಏರಿ ಕುಳಿತ ದಿನಸಿ ಬೆಲೆಗಳು

ದುರ್ಬಲ ಮುಂಗಾರು ಮಳೆ ಮತ್ತು ಎಲ್‌ನಿನೊ ಪರಿಣಾಮದಿಂದ ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಮತ್ತಷ್ಟು ಏರುವ ಸಾಧ್ಯತೆಯಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಆಹಾರ ಹಣದುಬ್ಬರ ಶೇ.10ಕ್ಕೆ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಈಗಾಗಲೇ ಸಕ್ಕರೆ, ಬೇಳೆಕಾಳು, ಗೋಧಿ, ಅಕ್ಕಿ, ಈರುಳ್ಳಿ, ಹಾಲು ಮತ್ತು ಕೋಳಿ ಮಾಂಸದ ಬೆಲೆ ಏರಿಕೆಯಾಗುತ್ತಿದೆ.

ದೆಹಲಿ: ದೇಶದಲ್ಲಿ ದುರ್ಬಲ ಮುಂಗಾರು ಮಳೆ ಮತ್ತು ಎಲ್‌ನಿನೊ ಪರಿಣಾಮದಿಂದ ಕೃಷಿ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ದಿನಬಳಕೆಯ ಆಹಾರ ಪದಾರ್ಥಗಳ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್‌ನ ಮುಖ್ಯ ಅರ್ಥಶಾಸ್ತ್ರಜ್ಞ ದೇವೇಂದ್ರ ಪಂತ್ ಅವರ ಅಂದಾಜಿನ ಪ್ರಕಾರ, 2026ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಮೂರು ತಿಂಗಳ ಅವಧಿಯಲ್ಲಿ ಆಹಾರ ಹಣದುಬ್ಬರ ಶೇ.10ರ ಸಮೀಪ ತಲುಪಬಹುದು. ದುರ್ಬಲ ಮಳೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಆಹಾರ ಹಣದುಬ್ಬರ ಶೇ.7.74ಕ್ಕೆ ಏರಿಕೆಯಾಗಿದೆ. ಇದರಿಂದ ಒಟ್ಟಾರೆ ಚಿಲ್ಲರೆ ಹಣದುಬ್ಬರವೂ ಶೇ.5.54ಕ್ಕೆ ತಲುಪಿದೆ.

ಕೃಷಿ ಉತ್ಪಾದನೆಗೆ ಮಳೆ ಕೊರತೆ ಹೊಡೆತ

ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ದಕ್ಷಿಣ ಮತ್ತು ಪಶ್ಚಿಮ ಭಾರತದ ಹಲವು ಭಾಗಗಳಲ್ಲಿ ರೈತರು ಚಳಿಗಾಲದ ಬೆಳೆಗಳ ಬಿತ್ತನೆಗೆ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.48ರಷ್ಟು ಕಡಿಮೆ ಮಳೆಯಾಗಿದೆ. ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿರುವುದರಿಂದ ಗೋಧಿ, ಕಡಲೆ ಮುಂತಾದ ಬೆಳೆಗಳನ್ನು ಬಿತ್ತಲು ರೈತರು ಕಷ್ಟಪಡುತ್ತಿದ್ದಾರೆ.

“ಮುಂದಿನ ಬೆಳೆ ಬಿತ್ತಲು ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿಲ್ಲ. ಬಿತ್ತನೆ ಮಾಡಲು ಬೇಕಾದ ಹಣವೂ ನಮ್ಮ ಬಳಿ ಉಳಿದಿಲ್ಲ” ಎಂದು ಜಲ್ನಾ ಜಿಲ್ಲೆಯ ರೈತ ಅಮರ್‌ಸಿಂಗ್ ಗುಶಿಂಗೆ ತಮ್ಮ ಸಂಕಷ್ಟವನ್ನು ರಾಯಿಟರ್ಸ್ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ.

ಕೋಳಿ ಮಾಂಸ, ಹಾಲಿನ ಬೆಲೆಯೂ ಏರಿಕೆ

ಕೋಳಿ ಆಹಾರ ತಯಾರಿಕೆಯಲ್ಲಿ ಬಳಸುವ ಮೆಕ್ಕೆಜೋಳ ಮತ್ತು ಸೋಯಾಬೀನ್ ಬೆಲೆ ಹೆಚ್ಚುತ್ತಿರುವುದರಿಂದ ಕೋಳಿ ಸಾಕಾಣಿಕೆ ವೆಚ್ಚವೂ ಏರಿದೆ. ಕೋಳಿ ಉತ್ಪಾದನೆಯ ಒಟ್ಟು ವೆಚ್ಚದಲ್ಲಿ ಈ ಎರಡು ಪದಾರ್ಥಗಳ ಪಾಲು ಶೇ.60ರಿಂದ 70ರಷ್ಟಿದೆ. ಈ ಹೆಚ್ಚುವರಿ ವೆಚ್ಚವನ್ನು ಕಂಪನಿಗಳು ಇನ್ನೂ ಸಂಪೂರ್ಣವಾಗಿ ಗ್ರಾಹಕರ ಮೇಲೆ ಹೊರಿಸಿಲ್ಲ. ಹೀಗಾಗಿ 2027ರ ಜನವರಿಯಿಂದ ಕೋಳಿ ಮಾಂಸದ ಬೆಲೆ ಮತ್ತಷ್ಟು ಏರುವ ಸಾಧ್ಯತೆಯಿದೆ ಎಂದು ಉದ್ಯಮದವರು ಅಂದಾಜಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಹಾಲು, ಹಾಲಿನ ಉತ್ಪನ್ನಗಳು ಮತ್ತು ಮೊಟ್ಟೆಗಳ ಬೆಲೆ ಏರಿಕೆಯ ಪ್ರಮಾಣ ಶೇ.4.8ರಿಂದ ಶೇ.5.1ಕ್ಕೆ ಹೆಚ್ಚಾಗಿದೆ. ಸಕ್ಕರೆಯ ಬೆಲೆ ಕಳೆದ ಒಂದು ವರ್ಷದಲ್ಲಿ ಸುಮಾರು ಶೇ.30ರಷ್ಟು ಏರಿಕೆಯಾಗಿದೆ.

ಇತ್ತ ಗೋಧಿಯ ಬೆಲೆ ಸುಮಾರು ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಅಕ್ಕಿಯ ಕೆಲವು ಉತ್ತಮ ಗುಣಮಟ್ಟದ ತಳಿಗಳ ಪೂರೈಕೆಯೂ ಕಡಿಮೆಯಾಗಿದೆ.

ಆಹಾರ ಪದಾರ್ಥಗಳ ಬೆಲೆ ಹೀಗೆಯೇ ಏರುತ್ತಿದ್ದರೆ ಕಡಿಮೆ ಆದಾಯದ ಕುಟುಂಬಗಳು ಬೇಳೆಕಾಳು, ಹಾಲು ಮತ್ತು ಕೋಳಿ ಮಾಂಸದಂತಹ ಪೌಷ್ಟಿಕ ಆಹಾರಗಳ ಬಳಕೆಯನ್ನು ಕಡಿಮೆ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವೀಸ್ ಎಚ್ಚರಿಸಿದ್ದಾರೆ.

ಮುಂದಿನ ಚಳಿಗಾಲದ ಬೆಳೆಗಳ ಬಿತ್ತನೆ ಮತ್ತು ಇಳುವರಿ ಹೇಗಿರಲಿದೆ ಎಂಬುದರ ಮೇಲೆ ಆಹಾರ ಪದಾರ್ಥಗಳ ಬೆಲೆ ಏರಿಳಿತ ನಿರ್ಧಾರವಾಗಲಿದೆ ಎಂದು ವರದಿ ತಿಳಿಸಿದೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು