ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಮೈಸೂರು ಅಂಬಾರಿ ವಿವಾದ: ರಾಜಮಾತೆಯ ಅಧಿಕಾರವೋ, ಪ್ರಜಾಪ್ರಭುತ್ವದ ಸಾರ್ವಭೌಮತ್ವವೋ?ಹಾರ್ಮುಜ್ ಜಲಸಂಧಿಯಲ್ಲಿ ಭಾರತ, ಚೀನಾ ದೇಶಗಳ ಸರಕು ಹಡಗುಗಳ ಸಂಚಾರಕ್ಕೆ – ಇರಾನ್ ನಿಂದ ಮುಕ್ತ ಅವಕಾಶಕಬ್ಬಿನ ಬೆಲೆ ನಿಗದಿ ವಿವಾದ: ಬೆಳಗಾವಿಯಲ್ಲಿ ಜೈಲ್ ಭರೋ ಚಳವಳಿ, ರೈತರು ಪೊಲೀಸ್ ವಶಕ್ಕೆಎಸ್‌ಐಆರ್ ವೇಳೆ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ ಕುಟುಂಬದ 6 ಸದಸ್ಯರ ಹೆಸರು ಮರುಸೇರ್ಪಡೆಗೆ ಹೈಕೋರ್ಟ್ ಆದೇಶಕಬ್ಬಿಗೆ ಪ್ರತಿ ಟನ್‌ಗೆ 3600 ರೂ ನೀಡಲು ನಿರ್ಧರಿಸಿದ್ದೇವೆ – ಸತೀಶ್‌ ಜಾರಕಿಹೊಳಿ ಘೋಷಣೆಮೂರು ತಿಂಗಳ ಬಳಿಕ ಚುನಾವಣಾ ಆಯೋಗದ ನಿರ್ಧಾರ ಬದಲಾವಣೆ: ಐಟಿ ವಿಭಾಗದ ಮೇಲ್ವಿಚಾರಣೆ ಮತ್ತೆ ಹಿರಿಯ ಅಧಿಕಾರಿಗೆಯುಜಿಸಿ ನಿಯಮಗಳ ಮರುಪರಿಶೀಲನೆಗೆ ಸಮಿತಿ ರಚಿಸುವ ಕುರಿತು ಯೋಚಿಸಲಾಗುತ್ತಿದೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರಹಾಸನದಲ್ಲಿ ಜನನುಡಿ ಪೂರ್ವಭಾವಿ ಸಭೆ – ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಬರ ಪರಿಹಾರ 2,500 ರೂ.ನಿಂದ 5,000 ರೂ.ಗೆ ಹೆಚ್ಚಳ – ಡಿ.ಕೆ. ಶಿವಕುಮಾರ್ರೇಷನ್ ಕಾರ್ಡ್ ಇ-ಕೆವೈಸಿಗೆ ಕೇವಲ 10 ದಿನ ಬಾಕಿ – 41.33 ಲಕ್ಷ ಫಲಾನುಭವಿಗಳು ಬಾಕಿ ಉಳಿಕೆಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ – BK ಹರಿಪ್ರಸಾದ್ಓದೋಣ ಬಾ ಗುರು – 3 : ಗ್ರಾಮ ಭಾರತದ ಬದುಕು ಬವಣೆಬೆಂಗಳೂರು | ಎಸ್‌ಐಆರ್ ರದ್ದು, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ ಪ್ರತಿಭಟನೆಚರ್ಚೆ ನಡೆಸುವುದು ಬೀದಿಯಲ್ಲಲ್ಲ, ಸಂಸತ್ತಿಗೆ ಬನ್ನಿ: ರಾಹುಲ್‌ ಗಾಂಧಿಗೆ ಅಮಿತ್‌ ಶಾ ತಿರುಗೇಟುಹವಾಮಾನ ಬದಲಾವಣೆ ಎದುರಿಸಲು ಜಗತ್ತು ಸಿದ್ಧವಾಗಿಲ್ಲ! ವಾರ್ಷಿಕ 305 ಬಿಲಿಯನ್ ಡಾಲರ್ ಅಗತ್ಯ: ವಿಶ್ವಸಂಸ್ಥೆ ವರದಿಭವ್ಯ ದೃಶ್ಯ ವೈಭವಕ್ಕೆ ಮೆಚ್ಚುಗೆ, ಕಥೆಯ ಆಳಕ್ಕೆ ಟೀಕೆ: ಜಾಗತಿಕ ಮಟ್ಟದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದ ‘ರಾಮಾಯಣ’!ಬಸ್‌ ದರ ಏರಿಕೆ | ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡಿನಲ್ಲಿ ಭಿಕ್ಷೆ ಬೇಡಿ ಪ್ರತಿಭಟಿಸಿದ ಬಿಜೆಪಿ; ಅಶೋಕ್‌ ಸೇರಿದಂತೆ ಹಲವರು ವಶಕ್ಕೆಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಿ: ಐಟಿ ಕಂಪನಿಗಳಿಗೆ ಡಿ.ಕೆ. ಶಿವಕುಮಾರ್ ಮನವಿಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗವಿಲ್ಲವೇ? ಭಾಷೆ, ಸ್ಥಳೀಯರ ಹಕ್ಕು ಮತ್ತು ಕಾರ್ಪೊರೇಟ್ ಹೊಣೆಗಾರಿಕೆಯ ಸುತ್ತ ಹೊಸ ಸಂಘರ್ಷ!ಬೆಳಗಾವಿಯಲ್ಲಿ ಕಬ್ಬಿನ ದರ ವಿವಾದಕ್ಕೆ ತಾತ್ಕಾಲಿಕ ತೆರೆ; ಟನ್‌ಗೆ ₹3,600 ನಿಗದಿ

ಅಬ್ಬರಿಸಿದ ಮಳೆ, ಉತ್ತರ ಕರ್ನಾಟಕ ಈಗ ತಂಪು ತಂಪು ಕೂಲ್‌ ಕೂಲ್‌

PPeepal Media Desk

Peepal Media Desk ದೇಶ

• 1 ನಿಮಿಷದ ಓದು

ಅಬ್ಬರಿಸಿದ ಮಳೆ, ಉತ್ತರ ಕರ್ನಾಟಕ ಈಗ ತಂಪು ತಂಪು ಕೂಲ್‌ ಕೂಲ್‌

ಬೆಳಗಾವಿ, ಬಾಗಲಕೋಟೆ, ಬೀದರ್ ಮತ್ತು ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಸುರಿದ ಮಳೆಯು ಅಲ್ಲಿನ ಜನರಿಗೆ ಬಿಸಿಲಿನ ಬೇಗೆಯಿಂದ ವಿಶ್ರಾಂತಿ ನೀಡಿತು.

ನಿನ್ನೆ ಸುರಿದ ತುಂತುರು ಮಳೆ ಬಾಗಲಕೋಟೆ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರಬಕವಿ-ಬನಹಟ್ಟಿ, ಬಾಗಲಕೋಟ ಪಟ್ಟಣ, ಹುನಗುಂದ, ಇಳಕಲ್, ಕೂಡಲಸಂಗಮ, ಬಿಳಗಿ, ಮಹಾಲಿಂಗಪುರ, ತೇರದಾಳ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಬಸವಕಲ್ಯಾಣ, ಹುಲಸೂರು, ಹುಮನಾಬಾದ್, ಬೀದರ್ ತಾಲೂಕುಗಳಲ್ಲೂ ಮಳೆಯಾಗಿದೆ. ಚಿತ್ರದ್ರುಗ ಪಟ್ಟಣದಲ್ಲಿ ಸಂಜೆ ಗುಡುಗು ಮಿಂಚು ಸಹಿತ ತುಂತುರು ಮಳೆ ಸುರಿದಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದೆ. ಪರಿಣಾಮ ಸೋಲಿಕಟ್ಟಿ ಗ್ರಾಮದಲ್ಲಿ 20 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಉತ್ತರ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಸುರಿದ ಮಳೆಗೆ ಪಪ್ಪಾಯಿ ಮರಗಳು ಧರೆಗುರುಳಿವೆ. ತಾಲೂಕಿನ ಕೋಡಂಬಿ ಗ್ರಾಮದಲ್ಲಿ ಸಿಡಿಲು ಬಡಿದು ಐದು ಜಾನುವಾರುಗಳು ಸಾವನ್ನಪ್ಪಿವೆ.

ಬೆಳಗಾವಿಯಲ್ಲಿ ತುಂತುರು ಮಳೆ ವಾತಾವರಣವನ್ನು ತಂಪಾಗಿಸಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯ ರಾಮದುರ್ಗ, ರಾಯಬಾಗ, ಹುಕ್ಕೇರಿ ತಾಲೂಕುಗಳಲ್ಲೂ ಮಳೆಯಾಗಿದೆ.

ವಿಜಯಪುರದಲ್ಲಿ ತುಂತುರು ಮಳೆಯಿಂದ ಪಾದರಸದ ಪ್ರಮಾಣ ತಗ್ಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದ ಭರಂತಿ ಹನುಮಂತ ಕೆಂಗನಾಳ (40) ಶುಕ್ರವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ, ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ ಮಧ್ಯಾಹ್ನ ಮತ್ತು ಸಂಜೆ ವಾಡಿಕೆ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ ಸೋಗಿ ಗ್ರಾಮದ ಒಂದೂವರೆ ಎಕರೆ ಬಾಳೆ ತೋಟ ಹಾಗೂ ಹೂವಿನ ಹಡಗಲಿಯ ಬಾವಿಹಳ್ಳಿಯಲ್ಲಿ ಎರಡು ಎಕರೆ ಹಲಸಿನ ತೋಟ ನಾಶವಾಗಿದೆ. ಸೋಗಿ ಗ್ರಾಮದ ಶಾಲೆಯೊಂದರ ಬಳಿ ಮಳೆಯಿಂದಾಗಿ ಎರಡು ವಿದ್ಯುತ್ ಕಂಬಗಳು ಹಾಗೂ ಕೆಲವು ಮರಗಳು ಧರೆಗುರುಳಿವೆ.

ಜಿಲ್ಲೆಯ ಉತ್ತಂಗಿ, ತಳಕಲ್ಲು, ಮಹಾಜನದಳ್ಳಿ, ಇಟ್ಟಿಗಿ, ಹೊಳಹುಂಡಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ತಾಪಮಾನದ ಮಟ್ಟ ತಗ್ಗಿದ್ದು, ಈ ಸ್ಥಳಗಳಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಸಂಜೆ ಒಂದು ಗಂಟೆ ಕಾಲ ಸಿಡಿಲು, ಬಿರುಗಾಳಿ ಸಹಿತ ಮಳೆ ಸುರಿದಿದೆ. ಬೇಸಿಗೆಯಲ್ಲಿ ಇದು ಮೊದಲ ಮಳೆಯಾಗಿತ್ತು. ಮಳೆಯ ನೀರು ರಸ್ತೆ ಹಾಗೂ ಚರಂಡಿಗಳಿಗೆ ಹರಿದಿದೆ. ಪಟ್ಟಣದ ತರಳಬಾಳು ಲೇಔಟ್‌ನಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಅಲೆಮಾರಿ ಹೆಳವರು ಸಂಕಷ್ಟ ಅನುಭವಿಸಿದರು.

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ನಾಪೋಕ್ಲು ಸಮೀಪದ ಹೊದ್ದೂರಿನ ಶ್ರೀ ಮಾರಿಯಮ್ಮ ಹಾಗೂ ಕೊರಗಜ್ಜ ವಾರ್ಷಿಕ ಜಾತ್ರೆಯಲ್ಲಿ ಭಗವತಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಧಾರಾಕಾರವಾಗಿ ಮಳೆ ಸುರಿದಾಗ ಭಕ್ತರು ಕುಣಿದು ಕುಪ್ಪಳಿಸಿದರು.

ವಿಷಯಗಳು: #india #kannada #news #peepal #peepalmedia
PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು