Home Uncategorized ಹುಬ್ಬಳ್ಳಿ Insta ಫೋಟೊ ಕೇಸ್:‌ ಕಾಲೇಜು ಹಳೇ ವಿದ್ಯಾರ್ಥಿ ಬಂಧನ

ಹುಬ್ಬಳ್ಳಿ Insta ಫೋಟೊ ಕೇಸ್:‌ ಕಾಲೇಜು ಹಳೇ ವಿದ್ಯಾರ್ಥಿ ಬಂಧನ

0

ಹುಬ್ಬಳ್ಳಿ: ವಿದ್ಯಾರ್ಥಿನಿಯರ ಫೋಟೊಗಳನ್ನು ಆಶ್ಲೀಲವಾಗಿ ಎಡಿಟ್‌ ಮಾಡಿ ಅದನ್ನು Instagram ನಲ್ಲಿ ಶೇರ್‌ ಮಾಡಿದ ಆರೋಪಿಯನ್ನು ಈಗ ಪತ್ತೆ ಹಚ್ಚಲಾಗಿದ್ದು, ಆತ ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಎನ್ನಲಾಗಿದೆ.

ಆರೋಪಿಯನ್ನು ರಜನಿಕಾಂತ ತಳವಾರ (21) ಎಂದು ಗುರುತಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಸಂತೋಷ್ ಬಾಬು ಕಡಿಮೆ ಹಾಜರಾತಿ ಇರುವ ಹಿನ್ನೆಲೆಯಲ್ಲಿ ಆರೋಪಿಗೆ ಈ ಬಾರಿ ಕಾಲೇಜಿನಲ್ಲಿ ಅಡ್ಮಿಷನ್ ನೀಡಿರಲಿಲ್ಲ. ಅದಕ್ಕಾಗಿ ಬಾಯ್ ಫ್ರೆಂಡ್ ಇರುವ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆತ ಸುಮಾರು 10 ಮಂದಿ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶೀಲ ರೀತಿಯಲ್ಲಿ ಎಡಿಟ್ ಮಾಡಿ ವೈರಲ್ ಮಾಡಿದ್ದ. ಸದ್ಯ ಆರೋಪಿಯ ಇಮೇಲ್ ಐಡಿ, ಸಾಮಾಜಿಕ ಜಾಲತಾಣಗಳ ವಿವರಗಳನ್ನು ವಿಧಿ ವಿಜ್ಞಾನಕ್ಕೆ ರವಾನ ಮಾಡಲಾಗಿದೆ.

“ಮೂರು ದಿನಗಳ ಹಿಂದೆಯೇ ಆತನನ್ನು ವಶಪಡಿಸಿಕೊಂಡಿದ್ದೇವೆ. ಆತನ ಜೊತೆ ಬೇರೆಯವರು ಇರಬಹುದು ಎಂಬ ಬಗ್ಗೆ ಅನುಮಾನ ಇದ್ದು ಈ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಆರೋಪಿ ತಾಕತ್‌ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಸವಾಲ್‌ ಹಾಕಿದ್ದ. ಮಾಧ್ಯಮಗಳು ಇದಕ್ಕೆ ಹಿಂದೂ ಮುಸ್ಲಿಂ ಆಯಾಮ ಕೊಟ್ಟು ಸುದ್ದಿ ಮಾಡಿದ್ದವು. ಉಡುಪಿ ಪ್ರಕರಣದ ಬೆನ್ನಲ್ಲೇ ಇದೂ ಸಂಭವಿಸಿದ್ದರಿಂದ ಜನರು ಈ ಕುರಿತು ಗೊಂದಲಕ್ಕೆ ಒಳಗಾಗಿದ್ದರು.

ಜೂನ್ 20ರಿಂದಲೇ ಆರೋಪಿಯು Instagram ನಲ್ಲಿ ಕಾಶ್ಮೀರಿ 1990_0 ಹೆಸರಿನ ನಕಲಿ ID ಸೃಷ್ಟಿಸಿ, ವಿದ್ಯಾರ್ಥಿನಿಯರ ಫೋಟೋಗಳನ್ನು ಕೆಟ್ಟದಾಗಿ ಎಡಿಟ್ ಮಾಡಿರುವ ಬಗೆ, ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು, ಆದರೆ ಕಾಲೇಜು ಆಡಳಿತ ಮಂಡಳಿ ದೂರು ಕೊಟ್ಟಿರಲಿಲ್ಲ ಎಂದು ನಾಲರು ವಿದ್ಯಾರ್ಥಿನಿಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

You cannot copy content of this page

Exit mobile version