ಗುಜರಾತ್ : ಸೆಪ್ಟಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಹಮದಾಬಾದ್ ಬಳಿ ಗುರುವಾರದಂದು ಜಾನುವಾರುಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದು ರೈಲಿನ ಮುಂಭಾಗಕ್ಕೆ ಹಾನಿಯಾಗಿರುವ ಘಟನೆ ನಡೆದಿದ್ದು, ರೈಲಿನ ಮುಂಭಾಗವನ್ನು ಬದಲಾಯಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಪ್ರಾರಂಭವಾದ ಮುಂಬೈ ಸೆಂಟ್ರಲ್-ಗಾಂಧಿನಗರದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ಜಾನುವಾರುಗಳಿಗೆ ಡಿಕ್ಕಿ ಹೊಡೆದಿದ್ದು, ರೈಲಿನ ಮುಂಭಾಗ ಹಾನಿಗೊಳಗಾಗಿದೆ. ಈ ಅಪಘಾತವು ಗುರುವಾರ ಬೆಳಗ್ಗೆ ಸುಮಾರು 11.15 ಕ್ಕೆ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್‌ನ ಬಳಿ ನಡೆದಿದ್ದು, ಘಟನೆ ನಡೆದ 24 ಘಂಟೆಗಳ ಒಳಗೆ ರೈಲನ್ನು ದುರಸ್ತಿ ಮಾಡಲಾಗಿದೆ. ಘಟನೆಯಿಂದ ಎಕ್ಸ್ ಪ್ರೆಸ್ ರೈಲಿನ ಡ್ರೈವರ್ ಕೋಚ್‌ನ ಮುಂಭಾಗದ ಕೋನ್ ಕವರ್ ಮತ್ತು ಮೌಂಟಿಂಗ್ ಬ್ರಾಕೆಟ್‌ಗಳಿಗೆ ಹಾನಿಯಾಗಿದ್ದು, FRP (ಫೈಬರ್ ರಿ ಇನ್ಫೋರ್ಸ್ಡ್ ಪ್ಲಾಸ್ಟಿಕ್) ನಿಂದ ರೈಲಿನ ಮುಂಭಾಗವನ್ನು ಮುಂಬೈನ ಕೋಚ್ ಕೇರ್ ಸೆಂಟರ್‌ನಲ್ಲಿ ಬದಲಿಸಲಾಗಿದೆ ಎಂದು ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ʼದೇಶದ ಎಲ್ಲಾರೈಲ್ವೆ ಹಳಿಗಳು ಇನ್ನೂ ನೆಲದ ಮೇಲೆ ಇವೆ. ಹೀಗಾಗಿ ಜಾನುವಾರುಗಳ ರೈಲಿಗೆ ಸಿಗುವ ಸಮಸ್ಯೆ ಮುಂದುವರೆಯುತ್ತಲೇ ಇದೆ. ಹೀಗಾದರೂ ಇಂತಹ ಸಮಸ್ಯೆಗಳನ್ನು ನಿಭಾಯಿಸಲು ರೈಲುಗಳನ್ನೇ ವಿನ್ಯಾಸಗೊಳಿಸಲಾಗುತ್ತಿದೆ. ನಿನ್ನೆಯ ಘಟನೆಯ ನಂತರವೂ ವಂದೇ ಭಾರತ್ ರೈಲಿಗೆ ಏನೂ ಆಗಿಲ್ಲ ಆ ರೀತಿ ಅದನ್ನು ವಿನ್ಯಾಸಗೊಳಿಸಲಾಗಿದ್ದು ರೈಲಿನ ಮುಂಭಾಗವನ್ನು 24 ಗಂಟೆಯ ಒಳಗೆ ದುರಸ್ತಿ ಮಾಡಲಾಗಿದೆ ಎಂದು ರೈಲಿನ ವಿನ್ಯಾಸದ ಬಗ್ಗೆ ಹೇಳಿದ್ದಾರೆ.
ಇದನ್ನೂ ನೋಡಿ : ನಮ್ಮ ಪರಂಪರೆ ಹಸ್ತಪ್ರತಿಗಳು ನಾಶವಾಗುತ್ತಿವೆ ಎಂಬ ವಿಷಯದ ಕುರಿತು ಗಣಿತ ಹಾಗೂ ಭಾರತೀಯ ಪ್ರಾಚೀನ ವಿಜ್ಞಾನಗಳಲ್ಲಿ ವಿದ್ವಾಂಸರಾದ ಪ್ರೊ.ರಾವ್ ಅವರ ಮಾತು.