ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಮಾಯಕರನ್ನು ನಕ್ಸಲಿಸಂಗೆ ಸೆಳೆದವರಿಗೂ ಹೊಣೆಗಾರಿಕೆ ನಿಗದಿಯಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮುರಾಹುಲ್ ಗಾಂಧಿ ಹೆಸರಿನ ಪೋಸ್ಟ್‌ಗಳಿಗೆ ನಿರ್ಬಂಧ; ‘ಮೆಟಾ’ ವಿರುದ್ಧ ಕಾನೂನು ಸಮರಕ್ಕೆ ಇಳಿದ ಕಾಂಗ್ರೆಸ್ತುಂಗಾ ನದಿಯಲ್ಲಿ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲು: ಈಶ್ವರ ಮಲ್ಪೆ ತಂಡದಿಂದ ಮೃತದೇಹಗಳ ಪತ್ತೆರಾಜ್ಯಾದ್ಯಂತ ಶಾಲೆಗಳಿಗೂ ರಜೆ ಇಂದು ರಜೆ -ಸತತ 3 ದಿನ ಲಾಂಗ್ ವೀಕೆಂಡ್ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೆಟಾ ವಿರುದ್ಧ – ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ಕಾಡಾನೆ ‘ಭೀಮ’ ಮೂಡಿಗೆರೆ ಎಂಟ್ರಿ – ತಾಲೂಕಿನಲ್ಲಿ ಹೆಚ್ಚಿದ ಆತಂಕತತ್ವಲೋಕ – ವಿ.ಸೀ. ಕಾವ್ಯ : ಬಾಳಿನ ತತ್ವಶೋಧನೆಬೊಗಸೆಗೆ ದಕ್ಕಿದ್ದು-102 : ಸರ್ವಾಧಿಕಾರಿ ಅಪಾಯದ ಗಂಟೆ ಕೇಳದಿದ್ದರೆ ನಮ್ಮಲ್ಲೇ ಗಂಭೀರ ದೋಷವಿದೆ!ಬಿಜೆಪಿ, ಆರ್‌ಎಸ್‌ಎಸ್ ಸಂವಿಧಾನದ ಶತ್ರುಗಳು | ಈ ಬಾರಿ ಮೀಸೆ ಇರುವ ವ್ಯಕ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ: ಅಸಾದುದ್ದೀನ್ ಓವೈಸಿಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿ ಬೆದರಿಕೆ ಆರೋಪ: ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸಿದ ತಮಿಳುನಾಡು ಸಿಎಂ ವಿಜಯ್ಕೇರಳದ ಜನರು, ಮಲಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರತಾಪ್ ಸಿಂಹ ವಿರುದ್ಧ ಕೊಡಗು ಹಿಂದೂ ಮಲಯಾಳಿ ಸಮಾಜದಿಂದ ದೂರುಭಾರತದ ಸಂವಿಧಾನ ; ಸಮಾನತೆಯ ಋತುಗಾನಅಮೆರಿಕದ ಸುಂಕ ಸಮರ: ಭಾರತದ ಮೇಲೆ ಶೇ.25 ಸುಂಕದ ಪ್ರಸ್ತಾಪ, ಮೋದಿ ರಾಜಿಯಾಗ್ತಾರಾ?ಕಾಂಗ್ರೆಸ್ ಒಬಿಸಿ ಮೀಸಲಾತಿ ಕಿತ್ತುಕೊಂಡು ಅದನ್ನು ಮುಸ್ಲಿಮರಿಗೆ ನೀಡಲು ಬಯಸುತ್ತಿದೆ: ನರೇಂದ್ರ ಮೋದಿಕರ್ನಾಟಕ ಹಿಜಾಬ್ ಪ್ರಕರಣದೊಂದಿಗೆ ಮತ್ತೊಂದು ಅರ್ಜಿ ವಿಚಾರಣೆಗೆ; ಅಲಹಾಬಾದ್ ಹೈಕೋರ್ಟ್ ತೀರ್ಪು ಪೂರ್ವನಿದರ್ಶನವಲ್ಲ ಎಂದ ಸುಪ್ರೀಂ ಕೋರ್ಟ್ಸಂವಿಧಾನ ದಿನ 2026: ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತೆ ಚರ್ಚೆಯಲ್ಲಿಶಾರುಖ್ ಖಾನ್ ವಿರುದ್ಧ ತಿರುಚಿದ ರೀಲ್ಸ್ ವೈರಲ್; ಸಂಘಪರಿವಾರದ ಹಿನ್ನೆಲೆಯ ಕಂಟೆಂಟ್ ಕ್ರಿಯೇಟರ್‌ಗೆ ಲೀಗಲ್ ನೋಟಿಸ್ಆಸ್ತಿಗಾಗಿ ಅಕ್ಕನನ್ನೇ ಕೊಂದ ವಕೀಲ; ಬೆಂಗಳೂರಿನಲ್ಲಿ ಮಕ್ಕಳ ಎದುರೇ ಮಹಿಳೆಯ ಹತ್ಯೆ, ಆರೋಪಿ ಪರಾರಿನಂದಿನಿ ಮೊಸರಿನ ಬೆಲೆ ಕೆ.ಜಿಗೆ ₹2 ಇಳಿಕೆ; ನವೆಂಬರ್ 29ರಿಂದ ಹೊಸ ದರ ಜಾರಿ

ತುಂಗಾ ನದಿಯಲ್ಲಿ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲು: ಈಶ್ವರ ಮಲ್ಪೆ ತಂಡದಿಂದ ಮೃತದೇಹಗಳ ಪತ್ತೆ

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ತುಂಗಾ ನದಿಯಲ್ಲಿ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲು: ಈಶ್ವರ ಮಲ್ಪೆ ತಂಡದಿಂದ ಮೃತದೇಹಗಳ ಪತ್ತೆ

ತೀರ್ಥಹಳ್ಳಿ: ತಾಲೂಕಿನ ಮಹಿಶಿ ಸಮೀಪದ ತುಂಗಾ ನದಿಯ ಹೊಸ ಸೇತುವೆಯ ಕೆಳಭಾಗದಲ್ಲಿ ಈಜಾಡಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ದುರಂತಕ್ಕೀಡಾಗಿದ್ದಾರೆ. ಘಟನೆಯ ಬೆನ್ನಲ್ಲೇ ಆರಂಭಗೊಂಡ ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಈಶ್ವರ ಮಲ್ಪೆ ಹಾಗೂ ಅವರ ತಂಡದ ನೆರವಿನಿಂದ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ.

ಬೆಂಗಳೂರಿನಿಂದ ಎರಡು ಟೆಂಪೋ ಟ್ರಾವೆಲರ್ ವಾಹನಗಳಲ್ಲಿ ಆಗಮಿಸಿದ್ದ ಯುವಕರು ನದಿಯಲ್ಲಿ ಈಜಾಡಲು ಇಳಿದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಾಳೂರು ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಆರಂಭದಲ್ಲಿ ಒಂದು ಮೃತದೇಹವನ್ನು ಹೊರತೆಗೆಯಲಾಗಿತ್ತು. ಬಳಿಕ ಶೋಧ ಕಾರ್ಯಕ್ಕೆ ಕೈಜೋಡಿಸಿದ ಈಶ್ವರ ಮಲ್ಪೆ ಅವರು ಮತ್ತೆರಡು ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶೋಧ ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕುರುವಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ಅವರ ಗೆಳೆಯರಾದ ಪ್ರಮೋದ್ ಪೂಜಾರಿ, ನಾಗೇಶ್ ಗುಂಡ, ಲಿಂಗರಾಜ್, ಕವಿರಾಜ್, ಪ್ರಕಾಶ್‌ ಹಾಗೂ ಸುಬ್ರಮಣ್ಯ ಶೆಟ್ಟಿ ಸೇರಿದಂತೆ ಸ್ಥಳೀಯರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಉದಯಪುರ, ಮಹಿಷಿ ಹಾಗೂ ದಬ್ಬಣಗದ್ದೆ ಭಾಗದ ಯುವಕರು ಮತ್ತು ಗ್ರಾಮಸ್ಥರು ಕೂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ ಹಾಗೂ ಈಶ್ವರ ಮಲ್ಪೆ ತಂಡದ ಸಮನ್ವಯದೊಂದಿಗೆ ಸ್ಥಳೀಯರು ಕತ್ತಲೆಯ ನಡುವೆಯೂ ನದಿಯಲ್ಲಿ ಶೋಧ ಕಾರ್ಯಕ್ಕೆ ನೆರವಾಗಿದ್ದಾರೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು