Home ಬೆಂಗಳೂರು ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳಿಗೆ ಶುಲ್ಕ: 350 ರೂಪಾಯಿ ತನಕ ಎಂಟ್ರಿ...

ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳಿಗೆ ಶುಲ್ಕ: 350 ರೂಪಾಯಿ ತನಕ ಎಂಟ್ರಿ ಫೀ ನಿಗದಿ

0

ಬೆಂಗಳೂರು: ನಗರದ ಪ್ರಸಿದ್ಧ ಕೃಷ್ಣರಾಜೇಂದ್ರ (ಕೆ.ಆರ್.) ಮಾರುಕಟ್ಟೆಗೆ ಪ್ರವೇಶಿಸುವ ಸರಕು ವಾಹನಗಳಿಗೆ ಪ್ರವೇಶ ಶುಲ್ಕ ವಿಧಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆ (BCCC) ಮುಂದಾಗಿದೆ. ಮಾರುಕಟ್ಟೆಯ ನಿರ್ವಹಣೆ ಮತ್ತು ಸ್ಮಾರ್ಟ್ ತಂತ್ರಜ್ಞಾನ ವ್ಯವಸ್ಥೆ ಅಳವಡಿಕೆಯ ಭಾಗವಾಗಿ 10 ವರ್ಷಗಳ ಅವಧಿಯ ಒಪ್ಪಂದದಡಿ ಈ ಶುಲ್ಕ ಸಂಗ್ರಹ ಪ್ರಕ್ರಿಯೆ ಜಾರಿಯಾಗಲಿದೆ.

ಹೊಸ ನಿಯಮಾವಳಿಗಳ ಅನ್ವಯ, ಪ್ರತಿ ಪ್ರವೇಶ ಮತ್ತು ನಿರ್ಗಮನಕ್ಕೆ (Entry & Exit) ವಾಹನಗಳ ಗಾತ್ರಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ. ಟ್ರಕ್ ಹಾಗೂ 6 ಅಥವಾ ಅದಕ್ಕಿಂತ ಹೆಚ್ಚು ಚಕ್ರಗಳ ಭಾರಿ ವಾಹನಗಳಿಗೆ ₹350, ನಾಲ್ಕು ಚಕ್ರಗಳ ಲಘು ಸರಕು ವಾಹನಗಳಿಗೆ (LMV) ₹100 ಹಾಗೂ ತ್ರೀ-ವೀಲರ್ ಸರಕು ವಾಹನಗಳಿಗೆ ₹75 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಇದಲ್ಲದೆ ಹಣ್ಣು, ತರಕಾರಿ, ಹೂವು ಹಾಗೂ ಇತರೆ ನಿಗದಿತ ಸರಕುಗಳ ಪ್ರತಿ ಚೀಲಕ್ಕೆ (ಬ್ಯಾಗ್) ₹5 ಪ್ರವೇಶ ದರ ವಿಧಿಸಲಾಗುತ್ತದೆ.

ಈ ಯೋಜನೆಯಡಿ ಎಎನ್‌ಪಿಆರ್ (ANPR – ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾ), ಸಿಸಿಟಿವಿ ಕಣ್ಗಾವಲು ಹಾಗೂ ನಗದು ರಹಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒಳಗೊಂಡ ಸ್ಮಾರ್ಟ್ ಗೇಟ್‌ಗಳನ್ನು ಮಾರುಕಟ್ಟೆಯ ಪ್ರವೇಶ ದ್ವಾರಗಳಲ್ಲಿ ಅಳವಡಿಸಲಾಗುತ್ತಿದೆ. ಯುಪಿಐ, ಪಿಒಎಸ್ (POS) ಯಂತ್ರಗಳು, ಕ್ಯೂಆರ್ ಕೋಡ್ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

You cannot copy content of this page

Exit mobile version