ಹಾಸನ: ತಾಲೂಕಿನ ಆಲದಳ್ಳಿ ಗ್ರಾಮದಲ್ಲಿ ಮಂಜೇಗೌಡ ಎಂಬುವವರು ಪಡೆದ ಸಾಲಕ್ಕೆ ಮನೆಯಿಂದ ಕುಟುಂಬವನ್ನು ಹೊರದಬ್ಬಿ ಬೀಗ ಹಾಕಿದ್ದನ್ನು ಖಂಡಿಸಿ ಸಾಮೂಹಿಕ ನಾಯಕತ್ವದ ಹಾಸನ ಜಿಲ್ಲಾ ರೈತ ಮುಖಂಡರಾದ ಕಣಗಲ್ ಮೂರ್ತಿ ನೇತೃತ್ವದಲ್ಲಿ ರೈತ ಸಂಘದಿಂದ ಮನೆ ಬೀಗ ಒಡೆದು ಹಾಕುವ ಮೂಲಕ ಫೈನಾನ್ಸ್ ಗೆ ದಿಕ್ಕಾರ ಕೂಗಿ ಮನೆಯನ್ನು ಮಾಲೀಕರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವ ಹಾಸನ ಜಿಲ್ಲಾ ಘಟಕದ ವತಿಯಿಂದ ಮೈಕ್ರೋ ಫೈನಾನ್ಸ್ ರವರು ಹಾಸನ ಜಿಲ್ಲೆ ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಆಲದಳ್ಳಿ ಗ್ರಾಮದಲ್ಲಿ ಮಂಜೇಗೌಡ ಎಂಬುವವರು ಪಡೆದ ಸಾಲಕ್ಕೆ ಮನೆಯಿಂದ ಕುಟುಂಬವನ್ನು ಹೊರದಬ್ಬಿ ಬೀಗ ಹಾಕಿದ್ದನ್ನು ಖಂಡಿಸಿದರು. ಮನೆ ನಿರ್ಮಾಣಕ್ಕಾಗಿ ಮಂಜೆಗೌಡ ಕುಟುಂಬ 9 ಲಕ್ಷ ರೂಗಳ ಸಾಲ ಮಾಡಿದ್ದರು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದ್ದಕ್ಕೆ ಮನೆಗೆ ಬೀಗ ಹಾಕಿ ಮನೆಯಲ್ಲಿದ್ದವರನ್ನು ಹೊರ ಹಾಕಲಾಗಿತ್ತು.
ಆರು ತಿಂಗಳ ಹಿಂದೆಯೇ ಮನೆಗೆ ಬೀಗ ಹಾಕಿರುವುದಾಗಿ ಇದೆ ವೇಳೆ ಆರೋಪಿಸಿದರು. ನಂತರ ಮನೆಯಿಲ್ಲದೆ ಬೀದಿಪಾಲಾಗಿ ಕೊಟ್ಟಿಗೆಯಲ್ಲಿ ಕುಟುಂಬ ನೆಲೆಸಿತ್ತು. ಮನೆ ಗೃಹ ಪ್ರವೇಶಕ್ಕು ಮುನ್ನವೇ ಮನೆ ಸೀಜ್ ಮಾಡಿದ್ದು, ಸಾಲ ಕಟ್ಟಲಾಗದೆ ಆರು ತಿಂಗಳಿAದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಮನೆ ನಿರ್ಮಾಣದ ವೇಳೆ ಮಗನಿಗೆ ಅಪಘಾತವಾಗಿದ್ದು, ಇದರಿಂದಲೇ ಸಾಲ ಕಟ್ಟಲು ಸಾಧ್ಯವಾಗಿರಲಿಲ್ಲ. ಆದಾರ್ ಹೌಸಿಂಗ್ ಫೈನಾನ್ಸ್ ನಿಂದ ಸಾಲ ಪಡೆದಿದ್ದ ಕುಟುಂಬ ಸಮಸ್ಯೆಯಲ್ಲಿತ್ತು. ಕರುಣೆ ತೋರದೆ ಮನೆಗೆ ಬೀಗ ಹಾಕಿ ಸೀಝ್ ಮಾಡಿದ್ದರು.
ನಮ್ಮ ರೈತ ತಂಡ ಡೈರೆಕ್ಟ್ ಆಕ್ಷನ್ ಮೂಲಕ ಫೈನಾನ್ಸ್ ರವರಿಗೆ ಮನೆ ಬೀಗ ಒಡೆದು ಹಾಕುವ ಮುಖಾಂತರ ವರದಬ್ಬಿದ ಮನೆಯವರನ್ನು ಮನೆಯ ಒಳಗಡೆ ಕಳಿಸಿ ಫೈನಾನ್ಸ್ ರವರಿಗೆ ಧಿಕ್ಕಾರ ಕೂಗಿ ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸಬಾರದಾಗಿ ಎಚ್ಚರಿಕೆ ನೀಡಲಾಗಿತ್ ಸಾಲದಿಂದ ಎದುರಿ ಮನೆಯಿಂದ ಹೊರ ಹೋಗಿದವರನ್ನು ಮತ್ತೆ ಮನೆಗೆ ಕಳಿಸಿದ್ದ ಹಾಸನ ಜಿಲ್ಲಾ ರೈತ ಸಂಘದ ಸಾಮೂಹಿಕ ರೈತರ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಇದೆ ವೇಳೆ ಜಿಲ್ಲಾ ರೈತ ಮುಖಂಡರಾದ ಕಣಗಲ್ ಮೂರ್ತಿ, ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಜಿ. ಮಂಜು, ಬೇಲೂರು ತಾಲೂಕು ಅಧ್ಯಕ್ಷ ಕೆ.ಪಿ. ಕುಮಾರ್, ಅರಕಲಗೂಡು ತಾಲೂಕು ಅಧ್ಯಕ್ಷ ಹೆಚ್.ಈ. ಜಗದೀಶ್, ಹಾಸನ ತಾಲೂಕು ಅಧ್ಯಕ್ಷ ಪ್ರಕಾಶ್, ಲಕ್ಕಯ್ಯ ಇತರರು ಉಪಸ್ಥಿತರಿದ್ದರು.