ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಶವಸಂಸ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತೂ ಇಂತೂ ದೂರುದಾರನ ಪರವಾಗಿ ಸಾಕ್ಷಿ ಹೇಳಲು 6 ಮಂದಿ ಸ್ಥಳೀಯರು ಇದೀಗ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ.
ಸುಮಾರು 12 ರಿಂದ 15 ವರ್ಷದ ಆಸುಪಾಸಿನ ಹೆಣ್ಣು ಮಗಳ ಶವ ಹೂತಿದ್ದಕ್ಕೆ ನಾವು ಪ್ರತ್ಯಕ್ಷ ಸಾಕ್ಷಿ ಎಂದು ಸಾಕ್ಷಿದಾರರು ಎಸ್ಐಟಿ ಎದುರು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶೋಧ ಕಾರ್ಯಕ್ಕೆ ಸಹಾಯ ಮಾಡುತ್ತೇವೆ ಎಂದು ಆಗಮಿಸಿದ್ದಾರೆ ಆದರೆ ಈ ಕುರಿತು ಎಸ್‌ಐಟಿ ಅಧಿಕಾರಿಗಳು ಇನ್ನೂ ಕೂಡ ಖಚಿತಪಡಿಸಿಲ್ಲ ಆರು ಜನರ ಹೇಳಿಕೆ ಸತ್ಯಾಸತ್ಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಅಧಿಕಾರಿಗಳು ಇದುವರೆಗೂ ಇದನ್ನು ಖಚಿತಪಡಿಸಿಲ್ಲ.