Home ದೇಶ ಹಾವನ್ನಾದರೂ ನಂಬಬಹುದು, ಆದರೆ ಬಿಜೆಪಿಯನ್ನು ನಂಬಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

ಹಾವನ್ನಾದರೂ ನಂಬಬಹುದು, ಆದರೆ ಬಿಜೆಪಿಯನ್ನು ನಂಬಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

0

ಕೋಲ್ಕತ್ತಾ: ಈಶಾನ್ಯ ರಾಜ್ಯಗಳ ಜನರ ವಿಶ್ವಾಸ ಕಳೆದುಕೊಂಡಿರುವ ಕಾರಣದಿಂದಲೇ ಬಿಜೆಪಿ ಅಸ್ಸಾಂ ಚುನಾವಣೆಗಾಗಿ ಹೊರಗಿನಿಂದ ಜನರನ್ನು ಕರೆತರುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ತೇಂತುಲಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ದೇಶದ ಎಲ್ಲಾ ತನಿಖಾ ಸಂಸ್ಥೆಗಳು ತಮ್ಮ ನಿಷ್ಪಕ್ಷಪಾತತೆಯನ್ನು ಕಳೆದುಕೊಂಡಿವೆ ಎಂದು ಕಿಡಿಕಾರಿದರು. ಎಲ್ಲಾ ವ್ಯವಸ್ಥೆಗಳನ್ನು ಬಿಜೆಪಿ ಹಣ ಕೊಟ್ಟು ಖರೀದಿಸಿದೆ ಎಂದು ಅವರು ದೂರಿದರು.

“ಉತ್ತರ ಪ್ರದೇಶದಿಂದ ಒಂದು ರೈಲು ತುಂಬ ಸುಮಾರು 50,000 ಜನರನ್ನು ಅಸ್ಸಾಂಗೆ ಕರೆತರಲಾಗಿದೆ. ಬೇಕಿದ್ದರೆ ಹಾವನ್ನಾದರೂ ನಂಬಬಹುದು, ಆದರೆ ಬಿಜೆಪಿಯನ್ನು ಮಾತ್ರ ನಂಬಲು ಸಾಧ್ಯವಿಲ್ಲ” ಎಂದು ಮಮತಾ ತೀಕ್ಷ್ಣವಾಗಿ ಟೀಕಿಸಿದರು.

You cannot copy content of this page

Exit mobile version