Home ದೆಹಲಿ ಮೋನಾಲಿಸಾ ಅಪ್ರಾಪ್ತ ವಯಸ್ಕಳು; ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

ಮೋನಾಲಿಸಾ ಅಪ್ರಾಪ್ತ ವಯಸ್ಕಳು; ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

0

ದೆಹಲಿ: ಕುಂಭಮೇಳದ ಮೂಲಕ ಖ್ಯಾತಿ ಪಡೆದಿದ್ದ ಮೋನಾಲಿಸಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಒಂದು ತಿಂಗಳ ಹಿಂದೆ ಕೇರಳದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದ ಅವರು, ಮದುವೆಯ ಸಮಯದಲ್ಲಿ ಇನ್ನೂ ಅಪ್ರಾಪ್ತೆಯಾಗಿದ್ದರು ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಅವರ ಪತಿಯ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪೋಕ್ಸೋ (POCSO) ಪ್ರಕರಣ ದಾಖಲಿಸಿದ್ದಾರೆ.

ಕಾನೂನು ಬಾಹಿರವಾಗಿ ವಿವಾಹವಾದ ಕಾರಣಕ್ಕಾಗಿ ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿಯೂ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ತನಿಖೆಯ ಪ್ರಕಾರ, ಮೋನಾಲಿಸಾ ಜನಿಸಿದ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದಾಗ ವಿವಾಹದ ದಿನದಂದು ಆಕೆಗೆ ಕೇವಲ 16 ವರ್ಷ 2 ತಿಂಗಳು 12 ದಿನಗಳು ಮಾತ್ರ ಆಗಿತ್ತು ಎಂದು ತಿಳಿದುಬಂದಿದೆ.

ಆದರೆ, ಕೇರಳದ ದೇವಸ್ಥಾನದಲ್ಲಿ ಮದುವೆ ನಡೆಯುವಾಗ ಮತ್ತು ಗ್ರಾಮ ಪಂಚಾಯತ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡುವಾಗ ಸಲ್ಲಿಸಲಾಗಿದ್ದ ದಾಖಲೆಗಳ ಪ್ರಕಾರ ಆಕೆಯ ವಯಸ್ಸು 18 ವರ್ಷ ಎಂದು ನಮೂದಿಸಲಾಗಿತ್ತು. ವಯಸ್ಸಿನ ದಾಖಲೆಗಳಲ್ಲಿನ ಈ ವ್ಯತ್ಯಾಸವು ಈಗ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ.

You cannot copy content of this page

Exit mobile version