ಬಸ್ಸಿನಲ್ಲಿ ಮಹಿಳೆಯೊಬ್ಬರನ್ನು ಅಸಭ್ಯವಾಗಿ ಮುಟ್ಟಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೇರಳದ ಕೋಳಿಕ್ಕೋಡ್‌ನಲ್ಲಿ ನಡೆದಿದೆ.
ಘಟನೆಯ ವಿವರ:
ಕೋಝಿಕ್ಕೋಡ್ ಜಿಲ್ಲೆಯ ಗೋವಿಂದಪುರಂ ನಿವಾಸಿ ದೀಪಕ್ (42) ಶುಕ್ರವಾರ (ಜನೆವರಿ 16) ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ತಮ್ಮೊಂದಿಗೆ ಹಾಗೂ ಮತ್ತೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಶಿಮ್ಜಿತಾ ಎಂಬುವವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಜನನಿಬಿಡವಾಗಿದ್ದ ಬಸ್ಸಿನಲ್ಲಿ ದೀಪಕ್ ಮಹಿಳೆಗೆ ಮೊಣಕೈ ತಾಗಿಸಿದಂತೆ ಆ ವಿಡಿಯೋದಲ್ಲಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು.
ಮಾನ ಹೋಯಿತೆಂದು ಪ್ರಾಣ ಕಳೆದುಕೊಂಡರು:
ತಮ್ಮ ಬಗ್ಗೆ ವಿಡಿಯೋ ವೈರಲ್ ಆಗಿರುವುದನ್ನು ಕಂಡು ದೀಪಕ್ ತೀವ್ರ ಆಘಾತಕ್ಕೊಳಗಾಗಿದ್ದರು. ಕುಟುಂಬಸ್ಥರು ಅವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದರೂ, ಸಮಾಜದಲ್ಲಿ ಮಾನ ಹೋಯಿತು ಎಂದು ಭಾವಿಸಿ ಅವರು ಭಾನುವಾರ ಬೆಳಿಗ್ಗೆ ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 7 ಗಂಟೆಯಾದರೂ ದೀಪಕ್ ಬಾಗಿಲು ತೆರೆಯದಿದ್ದಾಗ, ಬಾಗಿಲು ಒಡೆದು ನೋಡಿದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ.
ಕುಟುಂಬಸ್ಥರ ಆಕ್ರೋಶ:
ಶಿಮ್ಜಿತಾ ಹಂಚಿಕೊಂಡ ವಿಡಿಯೋದಿಂದಲೇ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ. “ಆ ವಿಡಿಯೋ ದೀಪಕ್ ಅವರನ್ನು ಕುಗ್ಗಿಸಿತು. ದಯವಿಟ್ಟು ಸತ್ಯ ತಿಳಿಯದೆ ವಿಡಿಯೋಗಳನ್ನು ಪೋಸ್ಟ್ ಮಾಡಿ ಯಾರ ಬದುಕಿನೊಂದಿಗೂ ಆಟವಾಡಬೇಡಿ,” ಎಂದು ದೀಪಕ್ ಆಪ್ತರು ಕಣ್ಣೀರು ಹಾಕಿದ್ದಾರೆ.
https://x.com/TeluguScribe/status/2013094481881665633?ref_src=twsrc%5Etfw%7Ctwcamp%5Etweetembed%7Ctwterm%5E2013094481881665633%7Ctwgr%5E220e29173b614a9687d1e1ad59228ab593b20113%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Ftelugu%2Fnamasthetelangaana-epaper-namasthe%2Fnational-updates-national%3Fmode%3Dpwaaction%3Dclick
ಟೆಲಿಮಾನಸ್ ಸಹಾಯವಾಣಿ 14416 ಇದುಉಚಿತ ಸಹಾಯವಾಣಿಯಾಗಿದ್ದು, ಆತ್ಮಹತ್ಯೆ ಯೋಚನೆಗಳು ಬಂದಲ್ಲಿ ಇದಕ್ಕೆ ಕರೆ ಮಾಡಿದಲ್ಲಿ ತರಬೇತಿ ಹೊಂದಿದ ಆಪ್ತಸಮಾಲೋಚಕರು ಮಾರ್ಗದರ್ಶನ ಮಾಡುತ್ತಾರೆ. ಖಿನ್ನತೆ, ಆತಂಕ ಕಾಯಿಲೆ, ಆತ್ಮಹತ್ಯೆ ಆಲೋಚನೆಗಳು ಇದ್ದಲ್ಲಿ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಮನೋವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ತೆಗೆದುಕೊಳ್ಳಲು ವಿಳಂಬ ಮಾಡದಿರಿ.
