ಹಾಸನ :ಮಾರ್ಚ್ 20 ರಂದು ಯುಗಾದಿ ಹಬ್ಬದ ಸಂಭ್ರಮದ ನಂತರದ ಹೊಸ ತೊಡುಕು ಹಾಗೂ ರಂಜಾನ್ ಸರಣಿ ರಜೆಗಳ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಮಾಂಸದಂಗಡಿಗಳತ್ತ ಜನರು ದೌಡಾಯಿಸಿದ್ದಾರೆ.
ನಿನ್ನೆ ಯುಗಾದಿ ಹಬ್ಬ ಆಚರಿಸಿದ ಜನರು, ಇಂದು ಹೊಸ ತೊಡುಕು ಹಿನ್ನೆಲೆ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ. ನಗರದ ಕೆ.ಜಿ ಕೊಪ್ಪಲು, ಒಂಟಿಕೊಪ್ಪಲು, ಕೆ.ಆರ್ ಮೊಹಲ್ಲಾ ಪ್ರದೇಶಗಳಲ್ಲಿನ ಮಾಂಸದ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಭಾರೀ ಜನಸಂದಣಿ ಕಂಡುಬಂದಿದೆ. ಕುರಿ, ಮೇಕೆ ಹಾಗೂ ಕೋಳಿ ಮಾಂಸದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ಖರೀದಿಗೆ ಬಂದ ಜನರು ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದರು.
ವಿಶೇಷವಾಗಿ ಕೆ.ಜಿ ಕೊಪ್ಪಲು ಪ್ರದೇಶದಲ್ಲಿ “ಗುಡ್ಡೆ ಮಾಂಸ” ಮಾರಾಟ ಹೆಚ್ಚಾಗಿದ್ದು, ಒಂದು ಗುಡ್ಡೆ ಮಾಂಸವನ್ನು ಸುಮಾರು 600 ರೂಪಾಯಿಗೆ ಮಾರಾಟ ಮಾಡಲಾಗಿದೆ. ಗುಡ್ಡೆ ಮಾಂಸ ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಒಟ್ಟಿನಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂಭ್ರಮ ರಾಜ್ಯದಲ್ಲಿ ಮಾಂಸ ವ್ಯಾಪಾರಕ್ಕೆ ಚೈತನ್ಯ ತಂದಿದೆ
