ಸಕಲೇಶಪುರ : ತೆರಿಗೆ ವಸೂಲಾತಿ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಆರೋಪದ ಮೇಲೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಪಿಡಿಒ ಸೋಮೇಗೌಡ ಎಚ್.ಜಿ. ಅವರನ್ನು ಅಮಾನತು ಮಾಡಿ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.
ಪಂಚಾಯಿತಿಯಲ್ಲಿ ತೆರಿಗೆ ವಸೂಲಾತಿ ಹಣವನ್ನು ದುರುಪಯೋಗ ಮಾಡಿಕೊಂಡಿರುವ ದೂರಿನ ಕುರಿತುಸಕಲೇಶಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. , ಗ್ರಾಮಸ್ಥರ ಹೋರಾಟಕ್ಕೆ ಸಂದ ಜಯ : ಕರ ವಸೂಲಿ ಬಿಲ್ ಕಲೆಕ್ಟೆರ್ ಹಣ ದುರ್ಬಳಕೆ ಬಗ್ಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಜ. 06 ರಂದು ಪಂಚಾಯತಿ ಮುಂಭಾಗ ಬೃಹತ್ ಪ್ರತಿಭಟನೆ ನೆಡೆಸಿ ಕರ ವಸೂಲಿಗಾರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯನ್ನು ಅಮಾನತುಗೊಳಿಸುವಂತೆ ಅಗ್ರಹಿಸಿದ್ದರು. ಇದೀಗಪಿಡಿಓ ಮೇಲೆ ಕ್ರಮವಾಗಿದ್ದು ಉಳಿದವರ ಮೇಲೆ ಕ್ರಮ ಯಾವಾಗ ಎಂಬ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಕೇಳಿ ಬಂದಿದೆ., ಪಂಚಾಯಿತಿಯಲ್ಲಿ ತೆರಿಗೆ ವಸೂಲಾತಿ ಹಣವನ್ನು ದುರುಪಯೋಗ ಮಾಡಿಕೊಂಡಿರುವ ದೂರಿನ ಕುರಿತುಸಕಲೇಶಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. 2023-24 ನೇ ಸಾಲಿನಲ್ಲಿ ₹37,23,705 ವಸೂಲಿ ಮಾಡಿದ್ದು, ಅದರಲ್ಲಿ₹ 28,58,994 ಅನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ₹8,64,711 ಜಮೆ ಮಾಡಿಲ್ಲ , 2024-25 ನೇ ಸಾಲಿನಲ್ಲಿ ₹25,23,164 ವಸೂಲಿ ಮಾಡಿದ್ದು, ₹18,30,903 ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ₹6,92,261 ಜಮೆ ಮಾಡಿಲ್ಲ ಎಂಬುದಪರಿಶೀಲನೆ ವೇಳೆ ತಿಳಿದು ಬಂದಿದೆ. ,ಸಕಲೇಶಪುರ ತಾಲ್ಲೂಕು ಪಂಚಾಯಿತಿ ಇಒ ಸಲ್ಲಿಸಿರುವ ವರದಿಯ ಆಧಾರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮೇಗೌಡ ಎಚ್.ಜಿ. ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.