147 ಪ್ರಯಾಣಿಕರನ್ನು ಹೊಂದಿದ್ದ ಏರ್ ಇಂಡಿಯಾ ತಿರುಚ್ಚಿ ವಿಮಾನವು ಹೈಡ್ರಾಲಿಕ್ ಸಮಸ್ಯೆ ಎದುರಿಸಿ ತುರ್ತು ಭೂಸ್ಪರ್ಶ ಮಾಡಿದೆ. ಸಮಸ್ಯೆ ಕಂಡ 3.30 ಗಂಟೆಗಳ ಕಾಲ ಪೈಲಟ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಪರಿಣಾಮ ಕೆಲ ನಿಮಿಷಗಳ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ತಮಿಳುನಾಡಿನ ತಿರುಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯದ ತಾಂತ್ರಿಕ ದೋಷ ಉಂಟಾಗಿತ್ತು. ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಇಂಧನವನ್ನು ಕಡಿಮೆ ಮಾಡಲು ಗಾಳಿಯಲ್ಲಿ ಸುತ್ತಲು ಪ್ರಾರಂಭಿಸಿತ್ತು. ದೊಡ್ಡ ಅನಾಹುತ ತಪ್ಪಿಸಲು ವಿಮಾನ ನಿಲ್ದಾಣದ ಅಧಿಕಾರಿಗಳ 20 ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಟೆಂಡರ್‌ಗಳನ್ನು ವಿಮಾನ ನಿಲ್ದಾಣದಲ್ಲಿ ಇರಿಸಲಾಗಿತ್ತು.
ಲ್ಯಾಂಡಿಂಗ್ ಸಮಸ್ಯೆ ಎದುರಿಸಿದ ಏರ್ ಇಂಡಿಯಾ ತಿರುಚ್ಚಿ ವಿಮಾನವು ಸುಮಾರು 30 ನಿಮಿಷಗಳ ಕಾಲ ತಿರುಚ್ಚಿ ನಿಲ್ದಾಣದ ಸುತ್ತಲೂ ಸುತ್ತಿದ್ದು, ಕೊನೆಗೆ ತಿರುಚ್ಚಿ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿದೆ. ಸಧ್ಯ ಪೈಲಟ್ ನ ಮುಂಜಾಗ್ರತೆಯಿಂದ ಆಗುವ ದೊಡ್ಡ ಅನಾಹುತ ತಪ್ಪಿದೆ ಎಂದು ವಿಮಾನ ನಿಲ್ದಾಣದ ಮೂಲಗಳಿಂದ ತಿಳಿದು ಬಂದಿದೆ.