Home ಬೆಂಗಳೂರು 3 ಪಕ್ಷಗಳ ಶಾಸಕರು ನನ್ನ ಜೊತೆಗಿದ್ದಾರೆ, ಹೊಸ ಪಕ್ಷ ಸ್ಥಾಪಿಸುತ್ತೇನೆ – ಇಬ್ರಾಹಿಂ

3 ಪಕ್ಷಗಳ ಶಾಸಕರು ನನ್ನ ಜೊತೆಗಿದ್ದಾರೆ, ಹೊಸ ಪಕ್ಷ ಸ್ಥಾಪಿಸುತ್ತೇನೆ – ಇಬ್ರಾಹಿಂ

0
xr:d:DAEuqMJFKx4:2413,j:47829662544,t:23052413

ಬೆಂಗಳೂರು : ಕರ್ನಾಟಕ (Karnataka ) ಕಂಡ ಹಿರಿಯ ರಾಜಕಾರಣಿ (Politician ) ಮಹತ್ವದ ಘೋಷಣೆ ಮಾಡಿದ್ದಾರೆ. ಹೊಸ ರಾಜಕೀಯ ಪಕ್ಷ ಘೋಷಣೆ ಮಾಡುವ ಕುರಿತು ಮೌನ ಮುರಿದಿದ್ದಾರೆ.ನಾನು ಜನರಿಗಾಗಿ ಮೂರನೇ ಶಕ್ತಿಯನ್ನು ತರಲು ಸಿದ್ಧನಾಗಿದ್ದೇನೆ ನಾಳೆ ಕಲ್ಬುರ್ಗಿಯಲ್ಲಿ ಸಭೆ ನಡೆಸಿ ಪಕ್ಷದ ಲಾಂಛನ ಹಾಗೂ ಚಿಹ್ನೆ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದಾರೆ.

ಬೆಂಗಳೂರೂರಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ,ಹಲವು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ನಿಮ್ಮ ಪಾರ್ಟಿಗೆ ಸೇರಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ ಎಂದು ಸಿಎಂ ಇಬ್ರಾಹಿಂ ಬಾಂಬ್ ಹಾಕಿದ್ದಾರೆ.

ನಾವು ಬಸವಣ್ಣ ಮತ್ತು ಅಂಬೇಡ್ಕರ್ ಸಿದ್ಧಾಂತದಂತೆ ನಡೆಯುತ್ತೇವೆ. ರಾಹುಲ್ ಗಾಂಧಿಗೆ ಇಂದಿರಾಗಾಂಧಿಯ ಶಕ್ತಿ ಬರಲಿಲ್ಲ ಮೋದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಶಕ್ತಿ ಬರಲಿಲ್ಲ ಕುರ್ಚಿ ಕಿತ್ತಾಟದ ವಿಚಾರದಲ್ಲಿ ಕರ್ನಾಟಕ ಇಬ್ಬಾಗ ಆಗುತ್ತದೆ ಎಂದು ಸಿಎಂ ಇಬ್ರಾಹಿಂ ಭವಿಷ್ಯ ನೀಡಿದರು.

ಸಿಎಂ ಸಿದ್ದರಾಮಯ್ಯ ಸಮಾಕಾಲೀನ ಇಬ್ರಾಹಿಂ ಜೆಡಿಎಸ್, ಕಾಂಗ್ರೆಸ್ ಎರಡರಲ್ಲೂ ಗುರುತಿಸಿಕೊಂಡಿದ್ದರು. ಕಳೆದ 1 ವರ್ಷದಿಂದ ರಾಜಕೀಯ ಚಟುವಟಿಕೆಗಳಿಂದ ದೂರವೇ ಇದ್ದಾರೆ. ಇದೀಗ ರಾಜ್ಯಕೆ ಪರ್ಯಾಯ ಪಕ್ಷ ಅವಶ್ಯಕತೆ ಇದೆ ಎಂದು ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ಚಿಂತನೆ ನಡೆಸಿದ್ದಾರೆ

You cannot copy content of this page

Exit mobile version