ಕೋಲಾರ: ಸದಾ ತನ್ನ ಅಸಂಬದ್ಧ ಮಾತುಗಳಿಂದಲೇ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಕೋಲಾರದ ಮುನಿಸ್ವಾಮಿ ನಿನ್ನೆಯ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಮತ್ತೆ ಹಗುರವಾಗಿ ಮಾತನ್ನಾಡಿದ್ದಾರೆ.
ಇದೇ ಸಭೆಯಲ್ಲಿ “ಸಿದ್ರಾಮಯ್ಯನೋರಿಗೆ ನರೇಂದ್ರ ಮೋದಿಯವರು ಕರೊನಾ ಇಂಜಕ್ಷನ್ ಫ್ರೀಯಾಗಿ ಹಾಕಿರ್ಲಿಲ್ಲ ಅಂದಿದ್ರೆ ಅವ್ರು ಯಾವತ್ತೋ ಸತ್ತೋಗಿರೋರು” ಎಂದು ಹೇಳಿದ್ದಾರೆ.
ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ರಾಹುಲ್ ಗಾಂಧಿ, ಡಿಕೆಶಿವಕುಮಾರ್, ಕಾಂಗ್ರೆಸ್‌ನ ಶಾಸಕರಿಗೂ ಸೇರಿ ಎಲ್ಲರಿಗೂ ಉಚಿತವಾಗಿ ಇಂಜೆಕ್ಷನ್ ಹಾಕಿರುವುದು ಮೋದಿ ಸರ್ಕಾರವಾಗಿದೆ. ಅಮೆರಿಕ, ರಷ್ಯಾ, ಜಪಾನ್ ದೇಶಗಳು ಒಂದೊಂದು ಇಂಜೆಕ್ಷನ್‌ಗೆ 5,000 ರೂ, 10,000 ರೂ. ಅನ್ನು ತೆಗೆದುಕೊಂಡಿವೆ” ಎಂದು ಹೇಳಿದರು.
“ಹೇ ನಾನು ಕುರಿ, ನಾನು ಹುಲಿ ಅಂತ ಹಾರಾಡಿದೋರೆಲ್ಲ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಜಲ್ದಿ ಹಾಕಪ್ಪ ಅಂತ ಹಾಕಿಸ್ಕೊಂಡ್ರು” ಎಂದೂ ವ್ಯಾಕ್ಸಿನ್ ಹಾಕಿಸಿಕೊಂಡ ಜನರನ್ನು ಸಂಸದ ವ್ಯಂಗ್ಯವಾಡಿದರು.
ಆದರೆ ಸಂಸದರು ಹೇಳುವಂತೆ ಬೇರೆ ದೇಶಗಳಲ್ಲಿಯೂ ಈ ವ್ಯಾಕ್ಸಿನ್ನಿಗೆ ಹಣ ತೆಗೆದುಕೊಂಡಿಲ್ಲ. ಅಲ್ಲೂ ಉಚಿತವಾಗಿಯೇ ನೀಡಲಾಗಿದೆ. ಭಾರತದಂತೆ ಅಲ್ಲಿಯೂ ಕೆಲವು ಹಣ ಕೊಟ್ಟು ಪಡೆಯಬಹುದಾದ ಲಸಿಕೆಗಳನ್ನು ಸಹ ಬಿಡುಗಡೆ ಮಾಡಲಾಗಿತ್ತು.
ಬೇರೆ ದೇಶಗಳಲ್ಲಿ ಹಣ ಪಡೆದು ವ್ಯಾಕ್ಸಿನ್ ನೀಡಲಾಗಿತ್ತೆ ಎನ್ನುವ ಕುರಿತು ಫ್ಯಾಕ್ಟ್ ಚೆಕ್ ಸಂಸ್ಥೆಯೊಂದು ನಡೆಸಿರುವ ಫ್ಯಾಕ್ಟ್ ಚೆಕ್ ಲಿಂಕ್ ಇಲ್ಲಿದೆ: