ಪಂಜಾಬ್ : ಅಮೃತಸರದಲ್ಲಿ ಇಂದು ಡ್ರಗ್ಸ್ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಪಂಜಾಬ್‌ಅನ್ನು ಮಾದಕ ವಸ್ತುಗಳ ಬಳಕೆಯಿಂದ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಅಲ್ಲಿನ ಎಡಿಜಿಪಿ ನರೇಶ್ ಅರೋರ ಹೇಳಿದ್ದಾರೆ.
ಇತ್ತೀಚೆಗೆ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದ್ದು ಜನರು ಕೆಟ್ಟ ಚಟಗಳಿಗೆ ತುತ್ತಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದಿನೇ ದಿನೇ ಡ್ರಗ್ಸ್ ದಂದೆ ಹೆಚ್ಚುತ್ತಿದ್ದು ತನಿಖೆ ಶುರು ಮಾಡಿರುವ ಅಲ್ಲಿನ ಪೋಲಿಸರು ಇಂದು ಅಮೃತಸರದಲ್ಲಿ ಡ್ರಗ್ಸ್ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಅಲ್ಲಿನ ಎಡಿಜಿಪಿ ಅಪರಾಧಿಗಳನ್ನು ʼಹಿಡಿಯುವುದು ಮತ್ತು ಅದರ ಬಳಕೆಯನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಡಿ-ಅಡಿಕ್ಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿನ ಜನರ ಸಹಕಾರದಿಂದ ಪಂಜಾಬ್ಅನ್ನು ಮಾದಕ ವಸ್ತುಗಳ ಬಳಕೆಯಿಂದ ಮುಕ್ತಗೊಳಿಸುತ್ತೇವೆʼ ಎಂದು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.