ಹಾಸನ: ಉರ್ದು ಅಕಾಡೆಮಿ ಬೆಂಗಳೂರು ಮತ್ತು ರೆಹ್ಬರ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಉರ್ದು ಭಾಷೆ ಮತ್ತು ಸಾಹಿತ್ಯದ ಅಭಿವೃದ್ದಿ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶದಿಂದ ರಾಷ್ಟ್ರಮಟ್ಟದ ಉರ್ದು ಮುಶಯಿರಾ (ಕವಿಗೋಷ್ಠಿ)ಯನ್ನು ಭವ್ಯವಾಗಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ 80 ಅಡಿ ರಸ್ತೆಯಲ್ಲಿರುವ ತಾಜ್ ಕನ್ವೆನ್ಷನ್ ಹಾಲ್‌ನಲ್ಲಿ ನಾಳೆ( ಡಿ.18) ಸಂಜೆ 8:30 ಗಂಟೆಗೆ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್. ಬಿ. ಮದನ ಗೌಡ ಭಾಗವಹಿಸಲಿದ್ದಾರೆ. ಈ ಮುಶಯಿರಾದ ಅಧ್ಯಕ್ಷತೆಯನ್ನು ಧಾರ್ಮಿಕ ಪಂಡಿತ ಹಾಗೂ ವಿದ್ವಾಂಸ ಮೌಲಾನಾ ಮುಫ್ತಿ ಮುಹಮ್ಮದ್ ಅಲಿ ಖಾಜಿ ಅವರು ವಹಿಸಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಹಾಸನದ ಉರ್ದು ಕವಿ ಜನಾಬ್ ಅನ್ವರ್ ಖಾನ್ ಅನ್ವರ್ ಅವರು ಮಾಡಲಿದ್ದು, ಗೌರವ ಅತಿಥಿಗಳಾಗಿ ಬೆಂಗಳೂರಿನ ಜನಾಬ್ ಮುನೀರ್ ಅಹ್ಮದ್ ಜಾಯ್, ಹಾಸನದ ಜನಾಬ್ ಸೈಯದ್ ಸಜ್ಜಾದ್ ಪಾಷಾ, ಜನಾಬ್ ಸಯ್ಯದ್ ತಾಜ್, ಡಾ.ಸಯ್ಯದ ಅಖ್ತರ್ ಖಾನಂ ಹಾಗೂ ಜನಾಬ್ ಹಾಜಿ ಸೈಯದ್ ಕಬೀರ್ ಅಹ್ಮದ್ ಮೀರ್ ಅವರು ಉಪಸ್ಥಿತರಿರಲಿದ್ದಾರೆ.
ಮುಶಾಯಿರಾದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಖ್ಯಾತ ಕವಿಗಳು ಕಾವ್ಯ ವಾಚನ ನಡೆಸಲಿದ್ದಾರೆ. ಪ್ರಮುಖವಾಗಿ ಮುನೀರ್ ಅಹ್ಮದ್ ಜಾಯ್ (ಬೆಂಗಳೂರು), ಡಾ. ಫರ್ಜಾನಾ ಫರಾಹ್ (ಭಟ್ಕಳ), ಇಬ್ರಾಹಿಂ ಸಾಗರ್ ಹಾಗೂ ಇರ್ಷಾದ್ ಅಂಜುಮ್ (ಮಹಾರಾಷ್ಟ್ರ), ರೇಷ್ಮಾ ತಲತ್ ಶಬ್ನಮ್ (ಕೋಲಾರ), ಜನಾಬ್ ನುಸ್ರತ್ ರಹೀಮ್ (ಚಿಕ್ಕಮಗಳೂರು), ಸೈಯದ್ ಕಬೀರ್ ಅಹ್ಮದ್ ಕಬೀರ್ (ಹಾಸನ), ತಾಲಿಬ್ ಶೋಲಾಪುರಿ (ಮಹಾರಾಷ್ಟ್ರ), ರಫೀಕ್ ಸರ್ವರ್ (ಮಾಲೆಗಾಂವ್), ಜಹೀರ್ ಕಾನ್‌ಪುರಿ (ಉತ್ತರ ಪ್ರದೇಶ), ರಹಮತುಲ್ಲಾ ರಹಮತ್ (ಶಿವಮೊಗ್ಗ), ಅಲ್ತಾಫ್ ಝಿಯಾ (ಮಾಲೆಗಾಂವ್), ಆಲಂ ನಿಜಾಮಿ ಜಮೀಯತಿ, ಸಾಕಿಬ್ ಜುನೈದಿ (ಕಾಂಚಿ), ಅಹ್ಮದ್ ಬಾಷಾ ಸಾಗರ್ (ಬಾಗಲಕೋಟೆ) ಹಾಗೂ ಲುತ್ಫುಲ್ಲಾ ಮಸ್ರೂರ್ ದಾವಿ (ಹಾಸನ) ಭಾಗವಹಿಸಲಿದ್ದಾರೆ. ಸಾಹಿತ್ಯಾಸಕ್ತ ರೆಲ್ಲರೂ ಸಮಯಕ್ಕೆ ಸರಿಯಾಗಿ ಮುಶೈರಾದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಉರ್ದು ಭಾಷೆ ಮತ್ತು ಸಾಹಿತ್ಯದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗುವುದೆಂದು ತಿಳಿಸಲಾಗಿ
