ಬೆಂಗಳೂರು: ಉಕ್ರೇನ್‌ನೊಂದಿಗೆ ನಡೆಸುತ್ತಿರುವ ಯುದ್ಧದ ಬೆನ್ನಲ್ಲೇ ರಷ್ಯಾಕ್ಕೆ ರಕ್ಷಣಾ ಉಪಕರಣಗಳು ಸೇರಿದಂತೆ ವಸ್ತುಗಳನ್ನು ರಫ್ತು ಮಾಡದಂತೆ ಅಮೆರಿಕವು ಭಾರತೀಯ ತಯಾರಕರಿಗೆ ಎಚ್ಚರಿಕೆ ನೀಡಿದೆ.
ಭಾರತದ ಮಾಡುವ ಇಂತಹ ರಫ್ತುಗಳಿಂದಾಗಿ ರಷ್ಯಾದ ಕ್ಷಿಪಣಿ ವ್ಯವಸ್ಥೆಗೆ ಬೆಂಬಲ ಸಿಕ್ಕಂತೆ ಆಗಬಹುದು ಎಂದು ಅಮೇರಿಕಾ ಸರ್ಕಾರವು ಭಾರತೀಯ ತಯಾರಕರೊಂದಿಗೆ ಸಂವಹನ ನಡೆಸಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ .
“ಕೆಮಿಕಲ್ಸ್, ಏರೋನಾಟಿಕಲ್ ಬಿಡಿಭಾಗಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳಲ್ಲಿ ಬಳಸಬಹುದಾದ ಕಂಪೋನೆಂಟ್‌ಗಳು ಸೇರಿದಂತೆ ನಿರ್ದಿಷ್ಟ ಉತ್ಪನ್ನಗಳ ರಫ್ತನ್ನು ನಿಲ್ಲಿಸಲು ಅಮೇರಿಕಾದ ಅಧಿಕಾರಿಗಳು ಉದ್ಯಮದೊಂದಿಗೆ ಸಮಾಲೋಚನೆ ಸಭೆಗಳನ್ನು ನಡೆಸುತ್ತಿದ್ದಾರೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಷ್ಯಾಕ್ಕೆ ರಫ್ತು ಮಾಡಲಾದ ದ್ವಿಬಳಕೆಯ ವಸ್ತುಗಳನ್ನು ವಿಶೇಷ ರಾಸಾಯನಿಕಗಳು ಅಥವಾ ಜೈವಿಕ ವರ್ಗಗಳಲ್ಲಿ (ಆರ್ಗನಿಸಂ) ಸೇರಿಸಲಾಗಿಲ್ಲ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ .
ಈ ವರ್ಷದ ಆರಂಭದಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಕೈವ್‌ಗೆ (Kyiv ) ಹೊಸ ವಾಯು ರಕ್ಷಣಾ ವ್ಯವಸ್ಥೆಯನ್ನು ಘೋಷಿಸಿದರು ಮತ್ತು 2022 ರಲ್ಲಿ ಉಕ್ರೇನ್ ಆಕ್ರಮಣವನ್ನು ಪ್ರಾರಂಭಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಒಗ್ಗಟ್ಟಿಗಾಗಿ ಒತ್ತಾಯಿಸಿದರು.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಹೊಸ ವಾಯು ರಕ್ಷಣೆಗಾಗಿ ಉಕ್ರೇನ್ ಬೆಂಬಲಿಗರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ರಷ್ಯಾವನ್ನು ಸೋಲಿಸಲು ನೆರವಾಗುವಂತೆ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳನ್ನು ಒತ್ತಾಯಿಸಿದ್ದರು