Home ದೆಹಲಿ ಈರುಳ್ಳಿ ಬೆಲೆ ಕೆಜಿಗೆ 65ರೂ, ಖಾರಿಫ್ ಬೆಳೆ ಉತ್ಪಾದನೆ ಕುಸಿತ – ಪ್ರಮುಖ ಕಾರಣ

ಈರುಳ್ಳಿ ಬೆಲೆ ಕೆಜಿಗೆ 65ರೂ, ಖಾರಿಫ್ ಬೆಳೆ ಉತ್ಪಾದನೆ ಕುಸಿತ – ಪ್ರಮುಖ ಕಾರಣ

ದೆಹಲಿ : ದೇಶಾದ್ಯಂತ ಈರುಳ್ಳಿ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.45ರಷ್ಟು ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ ಕೆಜಿಗೆ ₹45ರಿಂದ ₹52ರವರೆಗೆ ಈರುಳ್ಳಿ ಮಾರಾಟವಾಗುತ್ತಿದ್ದರೆ, ದೆಹಲಿಯಲ್ಲಿ ₹65ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಖಾರಿಫ್ ಬೆಳೆ ಉತ್ಪಾದನೆ ಕುಸಿತ ಹಾಗೂ ಹಬ್ಬದ ಸೀಸನ್‌ನ ಬೇಡಿಕೆ ಹೆಚ್ಚಳವೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಈರುಳ್ಳಿ ದರ ಏರಿಕೆಯಿಂದ ಗ್ರಾಹಕರು ಕಣ್ಣೀರಿಡುವಂತಾಗಿದ್ದು, ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ತನ್ನ ಬಳಿಯಿರುವ ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಪ್ರಮುಖ ನಗರಗಳಿಗೆ ಸಾಗಿಸಲು ‘ಕಾಂಡಾ ಎಕ್ಸ್‌ಪ್ರೆಸ್’ ವಿಶೇಷ ರೈಲು ಸೇವೆ ಆರಂಭಿಸಲು ಮುಂದಾಗಿದೆ.

ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆ

ದೇಶದ ಹಲವೆಡೆ ಈರುಳ್ಳಿ ಬೆಲೆ ಸರಾಸರಿ ಕೆಜಿಗೆ ₹42ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.45ರಷ್ಟು ಹೆಚ್ಚಳವಾಗಿದ್ದು, ಕಳೆದ ಒಂದು ತಿಂಗಳಲ್ಲೇ ಶೇ.19ರಷ್ಟು ಏರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬಫರ್ ಸ್ಟಾಕ್‌ನ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಸೋಮವಾರ, ಆಗಸ್ಟ್ 24ರಿಂದ ‘ಕಾಂಡಾ ಎಕ್ಸ್‌ಪ್ರೆಸ್’ ಮೂಲಕ ಈರುಳ್ಳಿ ಸಾಗಣೆ ಆರಂಭಿಸುವ ಯೋಜನೆ ರೂಪಿಸಲಾಗಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈರುಳ್ಳಿ ದರ

ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಕೆಜಿಗೆ ₹45ರಿಂದ ₹52ರವರೆಗೆ ಈರುಳ್ಳಿ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಕಳೆದ ವರ್ಷ ₹35ರಷ್ಟಿದ್ದ ಚಿಲ್ಲರೆ ಬೆಲೆ ಇದೀಗ ₹65ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ಕಳೆದ ವರ್ಷ ₹33ರಷ್ಟಿದ್ದ ದರ ಈ ಬಾರಿ ₹58ಕ್ಕೆ ತಲುಪಿದೆ. ಕೇರಳ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲೂ ಈರುಳ್ಳಿ ಬೆಲೆ ಹೆಚ್ಚಾಗಿದೆ.

You cannot copy content of this page

Exit mobile version