Home ಬ್ರೇಕಿಂಗ್ ಸುದ್ದಿ ಸದ್ದಿಲ್ಲದೇ ನಡೆಯುತ್ತಿದೆ “ಆಪರೇಷನ್ ಹಸ್ತ”; ಸಧ್ಯದಲ್ಲೇ 8 ಬಿಜೆಪಿ ಶಾಸಕರು ಕಾಂಗ್ರೆಸ್ ಗೆ!

ಸದ್ದಿಲ್ಲದೇ ನಡೆಯುತ್ತಿದೆ “ಆಪರೇಷನ್ ಹಸ್ತ”; ಸಧ್ಯದಲ್ಲೇ 8 ಬಿಜೆಪಿ ಶಾಸಕರು ಕಾಂಗ್ರೆಸ್ ಗೆ!

0

ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣ ಸೇರಿದಂತೆ ಹಲವು ಆರೋಪಗಳನ್ನಿಟ್ಟು ಆಡಳಿತ ಪಕ್ಷವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಬಿಜೆಪಿ ಪಕ್ಷ ಇನ್ನು ಕೆಲವೇ ದಿನಗಳಲ್ಲಿ ತನ್ನ 8 ಶಾಸಕರನ್ನು ಕಳೆದುಕೊಳ್ಳಲಿದೆ. ಹೀಗಂದಿದ್ದು ಬೇರಾರೂ ಅಲ್ಲ ಸ್ವತಃ ಬೆಂಗಳೂರಿನ ಬಿಜೆಪಿ ಶಾಸಕ.

ಹೌದು. ಚನ್ನಪಟ್ಟಣದಲ್ಲಿ ಬಿಜೆಪಿ ಟಿಕೆಟ್‌ ಸಿಗದ ಹಿನ್ನಲೆ ಸಿಪಿ ಯೋಗೇಶ್ವರ್ ಅವರು ಬಿಜೆಪಿಗೆ ಗುಡ್​ಬೈ ಹೇಳಿ ಕಾಂಗ್ರೆಸ್​​ನಿಂದ ಕಣಕ್ಕಿಳಿದಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ನಾನಂತೂ ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂಪರ್ಕದಲ್ಲಿದ್ದೇನೆ. ನನಗೆ ರಾಜಕಾರಣಕ್ಕಿಂತ ನನ್ನ ಕ್ಷೇತ್ರದ ಹಿತ ಮುಖ್ಯ. ಹೀಗಿರುವಾಗ ಬಿಜೆಪಿ ನಾಯಕರು ನನ್ನ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದೇ ಆದರೆ ನಾನು ಅದಕ್ಕೂ ಸಿದ್ಧ. ನನಗೆ ಯಾವುದೇ ಭಯವಿಲ್ಲ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್‌ ಹೇಳಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್ ಗೆ ಎಂಟು ಜನ ಶಾಸಕರು ಹೋಗುತ್ತಾರೆ. ಅದರಲ್ಲೂ ಬೆಂಗಳೂರಿನ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ. ನನ್ನ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಿಸಿದ್ರು ನನಗೆ ಭಯವಿಲ್ಲ. ಅಶೋಕ್ ಮಾತಿಗೆ ಬೆಲೆ ಕೊಡಬಾರದು. ಸದ್ಯದಲ್ಲಿ ನೋಡುತ್ತಿರಿ ಇನ್ನು ಎಂಟು ಮಂದಿ ಕಾಂಗ್ರೆಸ್ ಗೆ ಹೋಗುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಹಲವು ಬಾರಿ ಸೋಮಶೇಖರ್ ಕಾಂಗ್ರೆಸ್ ವೇದಿಕೆಯಲ್ಲೇ ಕಂಡಿದ್ದರು. ಪಕ್ಷವೇ ನನ್ನ ಮೇಲೆ ಶಿಸ್ತುಕ್ರಮ ಕೈಗೊಳ್ಳಲಿ ಎಂದು ಹೇಳಿದ್ದರೂ ಈ ಬಗ್ಗೆ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯದ ಸಂಗತಿ.

ಆದರೆ, ಇದೀಗ ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಸೋಮಶೇಖರ್ 8 ಬಿಜೆಪಿ ಶಾಸಕರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೊಸ ಬಾಂಬ್ ಹಾರಿಸಿದ್ದಾರೆ. ಇದರ ನಡುವೆ ಸದ್ಯದಲ್ಲೇ ಎಸ್‌ ಟಿ ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

You cannot copy content of this page

Exit mobile version