ಬೆಂಗಳೂರು: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಕಳೆದ ತಿಂಗಳು ಮೇ 29 ರಿಂದ 31 ರ ವರೆಗೆ, (2026) ನಡೆದ ಅಂತರಾಷ್ಟ್ರೀಯ 400 ಮೀಟರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಮಾರಿ ಪರಿನಿಧಿ ಭಾರ್ಗವ ಮಂಡಲಂ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ವಿಬ್‌ಜಿಯರ್ ಶಾಲೆಯ 7ನೇ ತರಗತಿ (Vibgyor High school, electronic cit,Bangalore )
ವಿದ್ಯಾರ್ಥಿನಿಯಾಗಿರುವ ಪರಿನಿಧಿ, ತನ್ನ ಅದ್ಭುತ ಪ್ರದರ್ಶನದ ಮೂಲಕ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.
ಇದಕ್ಕೂ ಮುನ್ನ, 2025ರಲ್ಲಿ ನಡೆದ ಅಂತರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ರಿಲೇ ವಿಭಾಗದಲ್ಲಿ ಭಾಗವಹಿಸಿ ಬಂಗಾರದ ಪದಕವನ್ನು ಗೆದ್ದಿದ್ದರು. ಇದೀಗ ಮತ್ತೊಮ್ಮೆ ಬೆಳ್ಳಿ ಪದಕ ಜಯಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಮಗಳ ಈ ಸಾಧನೆಯಿಂದ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, “ಪರಿನಿಧಿಯ ಈ ಸಾಧನೆ ನಮಗೆ ಅಪಾರ ಹೆಮ್ಮೆ ಮತ್ತು ಸಂತೋಷವನ್ನು ತಂದಿದೆ” ಎಂದು ಪೋಷಕರಾದ ಸಾಯಿಶಿಲ್ಪಾ ಹಾಗೂ ಭಾರ್ಗವ ಮಂಡಲಂ ಹರ್ಷ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಪರಿನಿಧಿ ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ದೇಶಕ್ಕೆ ಕೀರ್ತಿ ತರುವ ವಿಶ್ವಾಸ ವ್ಯಕ್ತವಾಗಿದೆ.
(NAME: Parinidhi Bhargava Mandlem
CLASS: 7
School: Vibgyor High school, electronic cit,Bangalore
Competition: International roller skating competition conducted at Jakarta,Indonesia
She Represented India and won silver medal in 400mts race)
