Home ರಾಜ್ಯ ʼಪೇಸಿಎಂʼ ಬೆನ್ನಲ್ಲೇ ʼಪೇಮೇಯರ್‌ʼ ಶುರುಮಾಡಿದ ಹುಬ್ಬಳ್ಳಿ : ಆಕ್ರೋಶಗೊಂಡ ಮೇಯರ್‌ ಅಂಚಟಗೇರಿ

ʼಪೇಸಿಎಂʼ ಬೆನ್ನಲ್ಲೇ ʼಪೇಮೇಯರ್‌ʼ ಶುರುಮಾಡಿದ ಹುಬ್ಬಳ್ಳಿ : ಆಕ್ರೋಶಗೊಂಡ ಮೇಯರ್‌ ಅಂಚಟಗೇರಿ

0

ಹುಬ್ಬಳ್ಳಿ–ಧಾರಾವಾಡ : ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ‘ಪೇಸಿಎಂ’ ಪೋಸ್ಟರ್ ಅಭಿಯಾನದ ಮಾದರಿಯಲ್ಲೇ ಹುಬ್ಬಳ್ಳಿಯಲ್ಲಿ ಬುಧವಾರದಂದು ‘ಪೇಮೇಯರ್’ ಪೋಸ್ಟರ್ ಅಭಿಯಾನವನ್ನು ನಡೆಸಲಾಯಿತು. ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಅವರ ಭಾವಚಿತ್ರದ ಜೊತೆಗೆ ‘ಪೇಮೇಯರ್’ ಪೋಸ್ಟರ್‌ನಲ್ಲಿ ಪೇ 40% ಎಂಬ ಅಭಿಯಾನವನ್ನು ನಡೆಸಿ ಕೆಲವು ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ

ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿಗಳಿಗೆ ನಾಗರಿಕ ಸ್ವಾಗತ ಕೋರುವ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಲಂಚಾವತಾರ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದು, ಸ್ಟೇಷನ್ ರಸ್ತೆ, ವಿವೇಕಾನಂದ ಆಸ್ಪತ್ರೆ ಬಳಿ, ಕಸದ ತೊಟ್ಟಿಗಳ ಮೇಲೆ ಹೀಗೆ ಮತ್ತಿತರ ಕಡೆ ‘ಪೇಮೇಯರ್’ ಪೋಸ್ಟರ್‌ಗಳನ್ನು ಅಂಟಿಸಿದ ಕಾಂಗ್ರೆಸ್ ನಾಯಕರು ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

ಪೋಸ್ಟರ್‌ನಲ್ಲಿ ಪೇ 40% ಎಂದು ಬರೆದಿದ್ದು ಈ ಕುರಿತು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಮುಖಂಡರು ಅಂಚಟಗೇರಿ ಅವರಿಗೆ ಪೋಸ್ಟ್‌ ಬರೆದಿದ್ದು, ಪೋಸ್ಟ್‌ನಲ್ಲಿ “ಅಂಚಟಗೇರಿ ಅವರೇ ನಿಮ್ಮ ಲಂಚಾವತಾರವನ್ನು ಸಾರುವ ಪೇಮೇಯರ್‌ ಪೋಸ್ಟರ್‌  ನೋಡಿ ಜನ ಛೀಮಾರಿ ಹಾಕುತ್ತಿದ್ದಾರೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನದ ಹೆಸರಿನಲ್ಲಿ ಸುಮಾರು 1.5 ಕೋಟಿ ರೂ ದುಂದು ವೆಚ್ಚ ಮಾಡಿ ಪೆಂಡಾಲ್‌ ಹಾಕಿದ ಮೇಲೆ ಕೊಟೇಶನ್‌ ಕೇಳಿ ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ಲೆಕ್ಕಕೊಡಿ. ಇಲ್ಲವೇ ರಾಜಿನಾಮೆ ನೀಡಿ” ಎಂದು ಬರೆದು ಕಳುಹಿಸಿದ್ದಾರೆ. ಇದಲ್ಲದೆ ʼಕೆಲಸದ ಚಿಂತೆ ಬೇಡ ಕಮೀಷನ್‌ ಕೇವಲ ʼಪೇಮೇಯರ್‌ʼ ಮಾಡಿ #40%ಸರ್ಕಾರʼ ಎಂದು ಟೀಕಿಸಿ ಬರೆದು ಕಾಂಗ್ರೆಸ್‌ ಮುಖಂಡರು ಅಭಿಯಾನ ನಡೆಸಿದ್ದಾರೆ

ಅಭಿಯಾನದ ಕುರಿತು ಮಾತನಾಡಿದ ಅಂಚಟಗೇರಿಯವರು ʼಇಂತಹ ಪೋಸ್ಟರ್ ಅನ್ನು ಶೇರ್ ಮಾಡಿರುವುದು ರಾಷ್ಟ್ರಪತಿ ಮತ್ತು ಅವಳಿ ನಗರದ ನಾಗರಿಕರನ್ನು ಅವಮಾನಿಸುತ್ತಿದೆಯೇ ಹೊರತು ಬೇರೇನೂ ಅಲ್ಲ. ಹುಬ್ಬಳ್ಳಿ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನಾನು ಭಾರತದ ರಾಷ್ಟ್ರಪತಿಗಳ ಕಚೇರಿಗೆ ಎಲ್ಲಾ ವಿವರಗಳೊಂದಿಗೆ ದೂರನ್ನು ರವಾನಿಸಿದ್ದೇನೆʼ ಎಂದು ಬಂದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಇಷ್ಟಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಾಕಿರುವ ರಜತ್ ಉಳ್ಳಾಗಡ್ಡಿಮಠ, ದೀಪಕ ಚಿಂಚೋರೆ, ಮಂಜುನಾಥ ದತ್ತಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಲ್ಲಿನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

🔸 *ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ*

https://chat.whatsapp.com/G94DLKaJrsBH07M7DvkqRo

ಇದನ್ನು ನೋಡಿ : ಬಿಜೆಪಿ ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ? ಈ ಕುರಿತು ಯುವ ರಾಜಕೀಯ ಮುಂದಾಳು ಸುರೇಶ್‌ ರಾಥೋಡ್‌ ಅವರ ವಿಶ್ಲೇಷಣೆ ಇಲ್ಲಿದೆ.

https://fb.watch/fPXYS-c8DQ/

You cannot copy content of this page

Exit mobile version