Home ಬ್ರೇಕಿಂಗ್ ಸುದ್ದಿ ಪರ್ಯಾಯ ಶಕ್ತಿಯಾಗಿ ದುಡಿಯುವ ಜನತೆ – ಮೀನಾಕ್ಷಿ ಸುಂದರಂ

ಪರ್ಯಾಯ ಶಕ್ತಿಯಾಗಿ ದುಡಿಯುವ ಜನತೆ – ಮೀನಾಕ್ಷಿ ಸುಂದರಂ

ಹಾಸನ: ದೇಶದ ಆರ್ಥಿಕತೆ ದುಡಿಯುವ ಜನರಿಗಲ್ಲ ಎಂಬ ಸ್ಥಿತಿ ನಿರ್ಮಿಸಿರುವ ಬಂಡವಾಳಶಾಹಿಗಳಿಗೆ ಪರ್ಯಾಯ ಶಕ್ತಿಯಾಗಿ ದುಡಿಯುವ ಜನತೆ ಎದ್ದು ನಿಲ್ಲಲಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಪ್ರತಿಪಾದಿಸಿದರು. 

ನಗರದ ಕಸಾಪ ಭವನದಲ್ಲಿ ಸಿಐಟಿಯು 7 ನೇ ಹಾಸನ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಜನವಿರೋಧಿ‌ ನೀತಿಗಳಿಂದ ಜನರು ಬೀದಿಗೆ ಬರುವಂತಾಗಿದೆ.  ಇನ್ನೊಂದೆಡೆ ಅಂತರರಾಷ್ಡ್ರೀಯ ಮಟ್ಟದಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ. 

ರಷ್ಯಾದಿಂದ ಬರುವ ವಸ್ತುಗಳಿಂದ ಭಾರತಕ್ಕೆ ಲಾಭವಿದೆ. ನಮ್ಮ ದೇಶದಲ್ಲಿನ ಆಯಿಲ್‌ ಕಂಪನಿಗಳಿಗೆ 80% ರಷ್ಟು ಲಾಭವಿದೆ ಮತ್ತು ಕೇಂದ್ರ ಸರ್ಕಾರಕ್ಕೆ ಎರಡು ಲಕ್ಷ ಕೋಟಿ ತೆರಿಗೆಯಿಂದ ಲಾಭ ಬಂದಿದೆ. ಆದರೆ ಈ ಲಾಭದ ಶೇ. 1 ಭಾಗವೂ ಜನರಿಗೆ ಸಿಗುತ್ತಿಲ್ಲ ಎಂದು ದೂರಿದರು. 

ದೇಶದ ಅಭಿವೃದ್ದಿಯಾಗಬೇಕು, ದೇಶವನ್ನು ಉಳಿಸಬೇಕು ಎಂದರೆ ಕಾರ್ಮಿಕರು ಹೆಚ್ಚು ದುಡಿಯಬೇಕು ಎಂದು  ಈ ದೇಶದ ಬಂಡವಾಳಶಾ ಹಿಗಳು ಹೇಳುತ್ತಿದ್ದಾರೆ. ಇವತ್ತಿನ ಬೆಲೆ ಏರಿಕೆಗೆ ಮೂಲ ಕಾರಣ ಇದೇ  ಬಂಡವಾಳಶಾಹಿಗಳು , ದೊಡ್ಡ ವ್ಯಾಪಾರಿಗಳು ಮತ್ತು  ಮೋದಿ ನೇತೃತ್ವದ ಕೇಂದ್ರ ಸರ್ಕಾರ.  ಭಾರತ ಕೃಷಿ ಪ್ರಧಾನ ರಾಷ್ಟ್ರ. ಆದರೆ ನಾವು ಗಮನಿಸಬೇಕಾದ್ದು ಏನೆಂದರೆ ಮೋದಿ ಅಮೇರಿಕಾದ ಜೊತೆಗಿನ ಸಂಬಂಧ ಹೇಗಿದೆ ಎಂದರೆ ಭಾರತದ ವ್ಯಾಪಾರಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎಂಬ ಮೊಂಡುತನ. ಇದರಿಂದ ಭಾರತಕ್ಕೆ ದೊಡ್ಡ ನಷ್ಟ ಉಂಟಾಗಲಿದೆ ಎಂದರು. 

ನಮ್ಮ ದೇಶದಲ್ಲಿ ಹುಟ್ಟಿದ ಎಂಟು ತಿಂಗಳುಗಳೊಳಗಿನ ಕರುವನ್ನು ವಿದೇಶಕ್ಕೆ ರಫ್ತು‌ ಮಾಡುವುದರಲ್ಲಿ ಭಾರತ ಒಂದನೇ ಸ್ಥಾನದಲ್ಲಿದೆ. ರಫ್ತು‌ ಮಾಡುತ್ತಿರುವವರೆಲ್ಲರೂ ಅದೇ ಹಿಂದೂ ಸಮಾಜದ ಬಂಡವಾಳಿಗರು. ಕರ್ನಾಟಕ ಸರ್ಕಾರ ಒಂದೆ ಕಂಪನಿಗೆ 16 ಸಾವಿರ ಕೋಟಿ ಹಣ ಖರ್ಚು ಮಾಡಿದೆ. ಆದರೆ ಇಲ್ಲಿ ಬಡವರಿಗೆ 2 ಸಾವಿರ ಕೊಟ್ಟರೆ ಅಥವಾ ಬಸ್ ಫ್ರೀ‌ ಮಾಡಿದರೆ ಸರ್ಕಾರವನ್ನು ಜನರನ್ನು ಮಾಧ್ಯಮಗಳು ತರಾಟೆಗೆ ತೆಗೆದುಕೊಂಡು ಜಾಡಿಸುತ್ತಾರೆ. ಇಲ್ಲಿ ಕೆಲವರೆ ಶ್ರೀಮಂತರಾದರೆ ಸಮಸ್ಯೆ ಇಲ್ಲ.. ಬಡಜನರಿಗೆ ಒಳ್ಲೆಯ ಸಂಬಳ ಕೊಟ್ಟರೆ,‌ ಸಣ್ಣ ಶ್ರೀಮಂತರಾದರೆ ಇಲ್ಲಿ ಸಮಸ್ಯೆ ಸೃಷ್ಠಿಯಾಗುತ್ತದೆ. ಹೀಗೆ ಕಷ್ಟ ಪಟ್ಟು ದುಡಿದರೆ ಇವರಿಗೆ ಸಂಬಳ‌ ಕೊಡುವುದು ಅವರು ತೆಗೆದುಕೊಳ್ಳುವುದು ಎಂದರು. 

ದುಡಿಮೆಗೆ ತಕ್ಕ ಕೂಲಿ ಕೇಳುವುದು ಮೂಲಭೂತ ಹಕ್ಕಲ್ಲ‌,  ಕೂಲಿ ಜಾಸ್ತಿ ಕೇಳುವ ಹಾಗಿಲ್ಲ,  ಕೂಲಿ ನಮ್ಮ ಹಕ್ಕು ಎಂಬುದನ್ನು ಕಾರ್ಮಿಕರು ಹೇಳುವ ಹಾಗಿಲ್ಲ ಇಂತಹ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಇಂತಹ ಸಮಸ್ಯೆಗಳನ್ನು ಎದುರಿಸಬೇಕಾದರೆ ನಾವು ದುಡಿಯುವ ಜನರು ಒಟ್ಟಾಗಿ ಹೋರಾಟ‌ ಮಾಡುವುದೆ ಪರಿಹಾರವಾಗಿದೆ ಎಂದರು. 

ಸಮ್ಮೇಳನಕ್ಕೆ ಶುಭ ಕೋರಿ  ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್‌ , ಕಾಯಕವೇ ಕೈಲಾಸ ಎನ್ನುವಂತೆ ನಮ್ಮ ಕಾರ್ಮಿಕರು ಮಾಡುತ್ತಲಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ದೇಶದ ದುಡಿಯುವ ಜನರನ್ನು ಮತ್ತೆದೆ ಹಳೆ‌ಕಾಲದ‌ ಶೋಷಣೆಗೆ ಕರೆದೊಯ್ಯುತ್ತಿದೆ.  ಕೆಲಸ ಮಾಡಬೇಕು ಆದರೆ ಬೇರೆ ಏನು ನಿರೀಕ್ಷಿಸಬಾರದು ಎಂದು ಭವದ್ಗೀತೆ ಹೇಳುತ್ತಲಿದೆ. ದುಡಿಯುವ ಜನರಿಗೆ ದುಡಿಮೆಯ ನಂತರ ಕೂಲಿ‌ ಸಿಗದಿದ್ದರೆ ಅವರಿಗೆ ಬದುಕಲು‌ ಸಾಧ್ಯವಿಲ್ಲ . ಹಾಗಾಗಿ ನಾವು ಎಲ್ಲವನ್ನು ಪ್ರಶ್ನೆ ಮಾಡಿ ಹೋರಾಟ ಮಾಡಿ ಪಡೆದುಕೊಳ್ಳಬೇಕಿದೆ‌ ಎಂದು ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ  ಧರ್ಮೇಶ್ ಮಾತನಾಡುತ್ತಾ , ಹಾಸನ ಸಮ್ಮೇಳನ ಎರಡು ದಿನಗಳು ನಡೆಯಬೇಕಿತ್ತು ಆದರೆ ರಾಜ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ‌ನಡೆಯುವುದರಿಂದ ನಾವು ಒಂದೆ ದಿನಕ್ಕೆ ಸೀಮಿತಗೊಳಿಸಿದ್ದೇವೆ. ಇಂದು ಕಾರ್ಮಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳಿಗೆ ಬಲಿಯಾಗುತ್ತಿದ್ದಾರೆ‌. ದೇಶ ತತ್ತರಿಸುತ್ತಿದೆ‌ ಇನ್ನೊಂದೆಡೆ ಪ್ಯಾಲೆಸ್ತೇನಿನಲ್ಲಿ ಮಕ್ಕಳು ಮಹಿಳೆಯರು ಇಸ್ರೇಲ್ ದಾಳಿಗೆ ಬಲಿಯಾಗುತ್ತಲೇ ಇದ್ದಾರೆ. ದೇಶ ದೇಶಗಳ ನಡುವೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿದ್ದೆ. ಜಗತ್ತಿನ ಸರ್ವಶಕ್ಕೆ ಅಮೇರಿಕಾ ಮುದಾಗುತ್ತಿರುವುದು ದೊಡ್ಡ ಅಪಾಯಕಾರಿ ಬೆಳವಣಿಗೆಯಾಗಿದೆ, ಬಂಡವಾಳಶಾಹಿಗಳ ಮುಖವಾಡವೂ ಕಳಚುತ್ತದೆ. ಯುದ್ದ, ಭಯೋತ್ಪಾಧನೆ, ಬಂಡವಾಳಶಾಹಿ ನೀತಿಗಳಿಂದ ಎಲ್ಲಾ ದೇಶಗಳು ನಲುಗುತ್ತಿದೆ ಆದರೆ ಇದಕ್ಕೆ ಪರಿಹಾರವೆಂದರೆ ಸಮಾಜವಾದ ವ್ಯವಸ್ಥೆ ಮಾತ್ರ ಸಮಾಜವಾದಿ ರಾಷ್ಡ್ರಗಳಿಂದ ಮಾತ್ರ ದೇಶದ ಮತ್ತು ಜನರ ಅಭಿವೃದ್ದಿ ಎನ್ನುವುದು ನಾವು ಮರೆಯಬಾರದು. ಈ ದೇಶದ ರಾಜಕೀಯ, ಆರ್ಥಿಕ ಬದಲಾವಣೆ ಯಾದರೆ ಮಾತ್ರ ಸಮಾಜಿಕ‌ ಬದಲಾವಣೆ ಸಾಧ್ಯ.  ಸಿಐಟಿಯು ಹಾಸನ ಜಿಲ್ಲೆಯಲ್ಲಿ ದಶಕಗಳ ಹೋರಾಟ ಮಾಡುತ್ತಲಿದೆ. ಮುಂದಿನ ದಿನಗಳಲ್ಲಿ‌ ದುಡಿಯುವ ಜ‌ನರ ಪರವಾಗಿ ಹೋರಾಟ ಮುಂದುವರೆಯುತ್ತದೆ ಎಂದರು.

ಮೊದಲಿಗೆ ಹಿರಿಯ ಕಾರ್ಮಿಕ ಮುಖಂಡ ಪಿ. ಸತ್ಯನಾರಾಯಣ ಸಮ್ಮೇಳನದ ದ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಸಮೇಳನ ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಕೆಎಸ್ಸಾರ್ಟಿಸಿ ನೌಕರರ ಸಂಘದ ಮುಂಜುನಾಥ್, ಡಿಎಚ್ಎಸ್ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ, ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ರಮೇಶ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version