Home ಬ್ರೇಕಿಂಗ್ ಸುದ್ದಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನೆಲಸಮ ಮಾಡಿರುವ ಘಟನೆ ಖಂಡಿಸಿ ಪ್ರತಿಭಟನೆ

ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನೆಲಸಮ ಮಾಡಿರುವ ಘಟನೆ ಖಂಡಿಸಿ ಪ್ರತಿಭಟನೆ

ಹಾಸನ : ಬೆಂಗಳೂರಿನಲ್ಲಿ ದಿವಂಗತ ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮ ಮಾಡಿರುವ ಘಟನೆ ಖಂಡಿಸಿ ನಗರದಲ್ಲಿ ಇಂದು ಹಾಸನ ಜಿಲ್ಲಾ ಡಾಕ್ಟರ್ ವಿಷ್ಣು ಸೇನಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಹಾಂತೇಶ್ ಮಾತನಾಡಿ, ಕಳೆದ 15 ವರ್ಷಗಳ ಹಿಂದೆ ವಿಷ್ಣುವರ್ಧನ್ ಅವರು ವಿಧಿವಶರಾದಾಗ ಸರ್ಕಾರಿ ಗೌರವಗಳೊಂದಿಗೆ ಅಭಿಮಾನ ಸ್ಟುಡಿಯೋ ನಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು ಆದರೆ ಇದೀಗ ಅದನ್ನು ಧ್ವಂಸಗೊಳಿಸಿರುವುದು ಖಂಡನೀಯ ಎಂದರು. 

ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳವನ್ನು ಅವರ ಅಭಿಮಾನಿಗಳು ಪುಣ್ಯ ಸ್ಥಳವಾಗಿ ಪರಿಗಣಿಸಿ ಅವರ ಹುಟ್ಟುಹಬ್ಬ ಹಾಗೂ ಅವರ ಪುಣ್ಯತಿಥಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ಗುರುವಾರ ರಾತ್ರಿ ಏಕಾಏಕಿ ಸ್ಮಾರಕವನ್ನು ಹೊಡೆದು ಹಾಕಿರುವುದು ಕನ್ನಡ ಚಿತ್ರರಂಗ ಹಾಗೂ ಹಿರಿಯ ಕಲಾವಿದರಿಗೆ ಮಾಡಿದ ಅಪಮಾನವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 

ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸ್ಮಾರಕವನ್ನು ಅದೇ ಸ್ಥಳದಲ್ಲಿ ಪುನರ್ ಸ್ಥಾಪಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಡಾಕ್ಟರ್ ವಿಷ್ಣು ಸೇನಾ ಸಮಿತಿ ಅಧ್ಯಕ್ಷ  ಎನ್. ಮಹಾಂತೇಶ್,  ಉಪಾಧ್ಯಕ್ಷರು ರಘುನಂದನ್,  ವಿಜಯಕುಮಾರ್, ದೇವರಾಜು ಚಂದ್ರು ನೀಡಿಗೆರೆ ತಮ್ಲಾಪುರ ಗಣೇಶ, ಪ್ರಕಾಶ ಬಿ.ಕೆ. ಸುರೇಶ್, ಆಟೋ ರಾಜು  ಮಂಜು ನೀತು ಕೊತಾರಿ, ರತ್ನಮ್ಮ ಮಮತಾ, ವಾಸು, ಮುಂತಾದ ಅಭಿಮಾನಿಗಳು ಉಪಸಿತರಿದ್ದರು.

You cannot copy content of this page

Exit mobile version