ಬೆಂಗಳೂರು: ಸಂಚಾರ ನಿಯಮ ಮೀರುವವರ ವಿರುದ್ಧ ಕಟ್ಟು-ನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದು ಇನ್ನು ಮುಂದೆ ಇಂತಹವರ ತಪ್ಪಿಗೆ ಅವರ ಫಾಸ್ಟ್ ಟ್ಯಾಗ್ ಖಾತೆಯಿಂದ ದಂಡ ಹಣ ಮುರಿದುಕೊಳ್ಳಲು ನಿರ್ಧರಿಸಲಾಗಿದೆ.
ಬೆಂಗಳೂರು – ಮೈಸೂರು ಹೈವೇಯಲ್ಲಿ ಮಿತಿ ಮೀರುತ್ತಿರುವ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು. ವಾಹನಗಳ ವೇಗದ ಮಿತಿಯನ್ನು ತಗ್ಗಿಸಲು ಮೇಲಿನ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಈ ಹೆದ್ದಾರಿಯಲ್ಲಿ ವೇಗಮಿತಿ ಗಂಟೆಗೆ 100 ಕಿಲೋಮೀಟರ್ ಇದ್ದು, ಈ ಹೈವೇಯಲ್ಲಿ ಚಲಿಸುವ ವಾಹನಗಳ ವೇಗವು ಟೋಲ್ ಪ್ಲಾಝಾ ಮೂಲಕ ಪೊಲೀಸರಿಗೆ ತಿಳಿಯುತ್ತದೆ. ಇಲ್ಲಿ ವೇಗ ಮಿತಿ ಮೀರಿದವರಿಗೆ ಸ್ಥಳದಲ್ಲೇ ದಂಡ ಹಾಕಿ ಫಾಸ್ಟ್ ಟ್ಯಾಗ್ ಖಾತೆಯಿಂದ ಕಡಿತ ಮಾಡಿಕೊಳ್ಳುವುದು ಪೊಲೀಸರ ಯೋಜನೆ. ಈ ಯೋಜನೆ ಯಶಸ್ವಿಯಾದಲ್ಲಿ ಉಳಿದ ಹೆದ್ದಾರಿಗಳಿಗೂ ಇದನ್ನು ಆಳವಡಿಸಿಕೊಳ್ಳಲಾಗುತ್ತದೆ.