ಹಾಸನ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ರಾಜಕೀಯ ಬದಲಾವಣೆಗಳ ಕುರಿತು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.“ಹೈಕಮಾಂಡ್ ನಮ್ಮೆಲ್ಲರ ಬಗ್ಗೆ ತೀರ್ಮಾನ ಮಾಡುತ್ತದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಹೈಕಮಾಂಡ್. ಅವಕಾಶ ಕೊಟ್ಟರೆ ಮಂತ್ರಿಗಿರಿಯನ್ನೇ ಬಿಟ್ಟು ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ ಅಷ್ಟೆ,” ಎಂದರು.
ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆಗೆ ವಿರೋಧವಿಲ್ಲ: ಶ್ರೀರಾಮುಲು ಅವರ ಕಾಂಗ್ರೆಸ್ ಸೇರ್ಪಡೆಯ ಕುರಿತಂತೆ ಮಾತನಾಡಿದ ಅವರು, “ಅವರ ಪಕ್ಷದ ವಿಚಾರ ನಮಗೆ ಸಂಬಂಧ ಇಲ್ಲ. ಆದರೆ, ಅವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಬಂದರೆ ನಮ್ಮ ಎಸ್‌ಟಿ ಮುಖಂಡರಿಗೆ ಯಾವುದೇ ವಿರೋಧ ಇಲ್ಲ” ಎಂದು ಹೇಳಿದರು.”ಶ್ರೀರಾಮುಲು ಪ್ರಭಾವಿ ಎಸ್‌ಟಿ ಸಮುದಾಯ ನಾಯಕರು. ಅವರು ಬಿಎಸ್‌ಅರ್ ಪಕ್ಷ ಸ್ಥಾಪನೆ ಮಾಡಿದ್ದಾಗ, ಕೆಲ ಶಾಸಕರನ್ನು ಗೆಲ್ಲಿಸಿದ್ದರು. ಅವರಿಂದ ಕಾಂಗ್ರೆಸ್ ಶಕ್ತಿ ಹೆಚ್ಚುತ್ತದೆ, ಅವರು ಬಂದರೆ ಸ್ವಾಗತ” ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಬಗ್ಗೆ ತೀಕ್ಷ್ಯ ಪ್ರತಿಕ್ರಿಯೆ: ಶ್ರೀರಾಮುಲು ಸೇರ್ಪಡೆಗೆ ಸಂಬಂಧಿಸಿದಂತೆ ಸತೀಶ್ ಜಾರಕಿಹೊಳಿ ವಿರೋಧಿಸುತ್ತಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದ ಅವರು, “ನಾವು ಆತ್ಮೀಯ ಸ್ನೇಹಿತರು.ರಾಜಕೀಯದಲ್ಲಿ ಯಾರು ಏನಾಗುತ್ತಾರೆಂಬುದನ್ನು ನಿರ್ಧರಿಸಲಾಗದು,” ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು.
ಮುಡಾ ಹಗರಣ ಹಾಗೂ ಸಿಎಂ ವಿರುದ್ಧದ ಆರೋಪ ಬಿಜೆಪಿ ಸೃಷ್ಟಿ: ಮುಡಾ ಹಗರಣದ ಕುರಿತು ಮಾತನಾಡಿದ ರಾಜಣ್ಣ, “ಇದು ಬಿಜೆಪಿ ಸೃಷ್ಟಿ, ಸಿಎಂ ವಿರುದ್ಧದ ಆರೋಪಗಳಲ್ಲಿ ಯಾವುದೇ ತಾರ್ಕಿಕತೆ 2. ಯಾರು ದೂರು ನೀಡಿದ್ದಾರೆ, ಅವರದ್ದೇ ದೂರು” ಎಂದು ಹೇಳಿದರು. “ಮುಡಾ ಅಥವಾ ಬಿಡಿಎ ಯಾವಾಗಲೂ ಕಾನೂನು ಬಾಹಿರ ಚಟುವಟಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಆಸ್ತಿಯನ್ನು ಲಪಟಾಯಿಸುವವರಿಗೆ ಶಿಕ್ಷೆ ಆಗಬೇಕೆಂಬುದು ನನ್ನ ಅಭಿಪ್ರಾಯ,” ಎಂದರು.
ಲೋಕಾಯುಕ್ತ ವರದಿ ಕುರಿತು ಸ್ಪಷ್ಟನೆ: ಸಿಎಂ ಹಾಗೂ ಅವರ ಪತ್ನಿಗೆ ಕ್ಲೀನ್ ಚಿಟ್ ನೀಡಿರುವ ಲೋಕಾಯುಕ್ತ ವರದಿ ಕುರಿತು ಅವರು, “ಜನವರಿ 25ರೊಳಗೆ ವರದಿ ಸಲ್ಲಿಸಲು ಕೋರ್ಟ್ ಆದೇಶ ನೀಡಿತ್ತು. ಸರ್ಕಾರದ ನಿರ್ದೇಶನವೇನೂ ಇಲ್ಲ. ವರದಿ ಹೊರಬಂದ ನಂತರವೇ ನಾವು ಪ್ರತಿಕ್ರಿಯೆ ನೀಡುತ್ತೇವೆ,” ಎಂದು ಸ್ಪಷ್ಟನೆ ನೀಡಿದರು. ರಾಜಕೀಯದಲ್ಲಿ ಬದಲಾವಣೆಗಳ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ರಾಜಣ್ಣ, “ರಾಜಕೀಯ ಎಂದರೆ ನಿಂತ ನೀರಲ್ಲ. ಏನಾಗುತ್ತದೆಂದು ಮೊದಲೇ ಹೇಳಲು ಸಾಧ್ಯವಿಲ್ಲ” ಎಂದರು.