Home ಬೆಂಗಳೂರು ರಾಜ್ಯದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಕೊಡಿ – ಕೆ.ಶಿವಕುಮಾರ್

ರಾಜ್ಯದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಕೊಡಿ – ಕೆ.ಶಿವಕುಮಾರ್

ಬೆಂಗಳೂರು: ಮೈಸೂರು ನಗರ ಸೇರಿದಂತೆ ರಾಜ್ಯದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಆಗ್ರಹಿಸಿದರು.

ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ಸಂಖ್ಯೆ ಕುಸಿದಿದ್ದು, ಸಮರ್ಪಕ ನಿರ್ವಹಣೆ ಕೊರತೆಯಾಗಿದೆ ಎಂದು ಅವರು ಹೇಳಿದರು. ಅನುದಾನದ ಅಭಾವದಿಂದ ಸಂರಕ್ಷಣೆ ಕುಂಠಿತವಾಗಿದ್ದು, ಭವಿಷ್ಯ ಪೀಳಿಗೆಗೆ ಸಂಸ್ಕೃತಿ ಉಳಿಸಲು ಕ್ರಮ ಅಗತ್ಯವಿದೆ ಎಂದರು. ಪಾರಂಪರಿಕ ಕಟ್ಟಡಗಳ ಸುತ್ತಮುತ್ತ ನಿರ್ಮಾಣ ನಿಯಮ ಉಲ್ಲಂಘನೆಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಂರಕ್ಷಣೆಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದ್ದು, ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

You cannot copy content of this page

Exit mobile version