ಸುಧಾಕರ್ ಗೆ ಪಕ್ಷ ಎಲ್ಲ ಅವಕಾಶ ಕೊಟ್ಟಿದೆ.ಅವಕಾಶ ಕೊಟ್ಟಾಗ ಅವರು ಏನೂ ಮಾಡಲಿಲ್ಲ.ಬೇರೆಯವರಿಗೆ ಅವಕಾಶ ಕೊಟ್ಟಾಗ ಸುಧಾಕರ್ ಅವ್ರು ಸಹಕಾರ ಕೊಡಬೇಕು ಎಂದು ಟಾಂಗ್ ನೀಡಿದ್ದಾರೆ.ಸುಧಾಕರ್ ಗೆ ಪಕ್ಷ ಎಲ್ಲ ಅವಕಾಶ ಕೊಟ್ಟಿದೆ.ಅವಕಾಶ ಕೊಟ್ಟಾಗ ಅವರು ಏನೂ ಮಾಡಲಿಲ್ಲ.ಬೇರೆಯವರಿಗೆ ಅವಕಾಶ ಕೊಟ್ಟಾಗ ಸುಧಾಕರ್ ಅವ್ರು ಸಹಕಾರ ಕೊಡಬೇಕು ಎಂದು ಟಾಂಗ್ ನೀಡಿದ್ದಾರೆ.
ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಪಕ್ಷದ ಆಂತರಿಕ ಕಚ್ಚಾಟ ಕೇಸರಿಪಡೆಗೆ ದೊಡ್ಡ ಡ್ಯಾಮೇಜ್ ಮಾಡ್ತಿದೆ. ಎಂಪಿ ಡಾ. ಸುಧಾಕರ್ ಭಿನ್ನರಾಗ ಕಮಲಪಾಳಯವನ್ನ ಕಂಗೆಡಿಸಿದೆ.
ಸುಧಾಕರ್ ಪ್ರೆಸ್ ಮೀಟ್ ಮಾಡಿ ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದೆ ತಡ ಒಬ್ಬೊಬ್ಬರೇ ಸುಧಾಕರ್ ವಿರುದ್ಧ ಕೆಂಡ ಕಾರುತ್ತಿದ್ದಾರೆ.ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಎಂಪಿ ಡಾ. ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ.
ಒಬ್ರು ಸಮಾಧಿ ಕಟ್ಟುತ್ತೀನಿ ಅಂತಿದ್ದಾರೆ, ಇನ್ನೊಬ್ರು ಮುಗಿಸ್ತೀನಿ ಅಂತಿದ್ದಾರೆ. ಸ್ವಂತ ಶಕ್ತಿ ಮೇಲೆ ನಂಬಿಕೆ ಇಲ್ಲದಿದ್ದರೆ ಬೇರೆಯವರು ಮುಗಿಸ್ತಾರೆ ಅನ್ನೋ ಭಾವನೆ ವ್ಯಕ್ತಪಡಿಸುತ್ತಾರೆ. ನನ್ನ ಶಕ್ತಿ ಮೇಲೆ ನನಗೆ ನಂಬಿಕೆ ಇದ್ದು, ಬೇರೆಯವರು ಮುಗಿಸಲು ಬಂದಾಗ ನಾನು ಉಳ್ಕೊಳ್ಳೋದೇ ರಾಜಕಾರಣ ಎಂದು ಸುಧಾಕರ್ ಗೆ ಕೌಂಟರ್ ನೀಡಿದ್ದಾರೆ.ತಮ್ಮನ್ನ ತಾವು ರಕ್ಷಿಸಿಕೊಳ್ಳುವ ಕಲೆ ಗೊತ್ತಿದ್ರೆ ರಾಜಕೀಯದಲ್ಲಿರಬೇಕು, ಇಲ್ಲದಿದ್ರೆ ಮನೆಯಲ್ಲಿರಬೇಕು.ಎಲ್ಲ ಸಂಘರ್ಷ ಮೀರಿ, ಪಕ್ಷ ಕಟ್ಟಿ, ಜನರ ಮನಸು ಗೆಲ್ಲಬೇಕು ಟಿಕೆಟ್ ಕೊಟ್ರೆ ಪಕ್ಷ ಒಳ್ಳೇದು, ಇಲ್ಲದಿದ್ರೆ ಕೆಟ್ಟದಾಗುತ್ತಾ?ಸುಧಾಕರ್ ಹಪಾಹಪಿ ಮಾಡೋದು ಬೇಡ, ಸಮಾಧಾನವಾಗಿರಲಿ ಎಂದು ಪ್ರೀತಂ ಗೌಡ ತಿಳಿಸಿದ್ದಾರೆ.