Home ದೇಶ ಮತದಾರರ ಪಟ್ಟಿಯಲ್ಲಿ 96 ಲಕ್ಷ ಕೃತಕ ಮತದಾರರ ಸೇರ್ಪಡೆ: ರಾಜ್ ಠಾಕ್ರೆ ಗಂಭೀರ ಆರೋಪ

ಮತದಾರರ ಪಟ್ಟಿಯಲ್ಲಿ 96 ಲಕ್ಷ ಕೃತಕ ಮತದಾರರ ಸೇರ್ಪಡೆ: ರಾಜ್ ಠಾಕ್ರೆ ಗಂಭೀರ ಆರೋಪ

0

ಮುಂಬೈ: ಮಹಾರಾಷ್ಟ್ರದ ಮತದಾರರ ದಾಖಲೆಗಳಲ್ಲಿ ಚುನಾವಣಾ ಆಯೋಗವು 96 ಲಕ್ಷ ನಕಲಿ ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಸ್ಥಾಪಕಾಧ್ಯಕ್ಷ ರಾಜ್ ಠಾಕ್ರೆ ಅವರು ರವಿವಾರ ತೀವ್ರ ಆರೋಪ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ವಿಮರ್ಶಿಸಿದರು. ಮತದಾರರ ಪಟ್ಟಿಯನ್ನು ಸಮಗ್ರವಾಗಿ ಶುದ್ಧೀಕರಿಸುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದರು. ಈ ಶುದ್ಧೀಕರಣ ಪ್ರಕ್ರಿಯೆಯಿಂದ ಎಲ್ಲಾ ರಾಜಕೀಯ ಪಕ್ಷಗಳಿಗೆ ತೃಪ್ತಿಯಾಗುವವರೆಗೆ ಮಹಾರಾಷ್ಟ್ರದಲ್ಲಿ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬಾರದು ಎಂದು ಅವರು ಆಗ್ರಹಿಸಿದರು.

ಮುಂಬೈಯ ಗೋರೆಗಾಂವ್‌ನಲ್ಲಿರುವ ನೆಸ್ಕೊ ಸಂಕೀರ್ಣದಲ್ಲಿ ಆಯೋಜಿಸಲಾಗಿದ್ದ ಎಂಎನ್‌ಎಸ್‌ನ ಬೂತ್ ಮಟ್ಟದ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. “ಮತದಾರರ ಪಟ್ಟಿಯನ್ನು ತಿರುಚಿ ಚುನಾವಣೆಗಳನ್ನು ನಡೆಸಿದರೆ, ಅದು ಮತದಾರರಿಗೆ ಮಾಡುವ ಅತ್ಯಂತ ದೊಡ್ಡ ಅಪಮಾನ,” ಎಂದು ರಾಜ್ ಠಾಕ್ರೆ ಹೇಳಿದರು.

“ನೀವು ಮತ ಚಲಾಯಿಸಿದರೂ ಅಥವಾ ಚಲಾಯಿಸದಿದ್ದರೂ, ಪಂದ್ಯವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ (Match fixed). ಫಲಿತಾಂಶ ಪೂರ್ವ ನಿರ್ಧರಿತವಾಗಿರುತ್ತದೆ. ನಾವು ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಾಗ, ಆಡಳಿತ ಪಕ್ಷ ಯಾಕೆ ತಕ್ಷಣ ಪ್ರತಿಕ್ರಿಯಿಸುತ್ತದೆ?” ಎಂದು ಅವರು ಪ್ರಶ್ನಿಸಿದರು.

You cannot copy content of this page

Exit mobile version