ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್ ನಿಧನರಾಗಿದ್ದಾರೆ. 96 ವರ್ಷದ ಬ್ರಿಟನ್ ರಾಣಿ ಎರಡನೇ ಎಲಿಝಬೆತ್ ಅವರ ಆರೋಗ್ಯದಲ್ಲಿ ಏರುಪೇರಾಗಿ ವೈದ್ಯರ ನಿಗಾದಲ್ಲಿ ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ರಾತ್ರೆ ಕೊನೆಯುಸಿರೆಳದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
1953 ರಿಂದ ಬ್ರಿಟನ್ ನ ರಾಣಿಯಾಗಿ ಸುದೀರ್ಘ 7 ದಶಕಗಳ ಕಾಲ ಸೇವೆ ಸಲ್ಲಿಸಿದ ಅವರ ಪೂರ್ಣ ಹೆಸರು ಅಲೆಕ್ಸಾಂಡ್ರಾ ಮೇರಿ ವಿಂಡ್ಸರ್. ರಾಣಿ ನಿಧನದ ನಂತರ ಎಲಿಜಬೆತ್ ಅವರ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರಾಣಿ ಎಲಿಜಬೆತ್ ಗೆ ನಾಲ್ಕು ಮಕ್ಕಳು, ಎಂಟು ಮೊಮ್ಮಕ್ಕಳು ಮತ್ತು 12 ಮರಿ ಮಕ್ಕಳು ಇದ್ದರು. ಪ್ರಿನ್ಸ್ ಚಾರ್ಲ್ಸ್, ಪ್ರಿನ್ಸೆಸ್ ಅನ್ನಿ, ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಎಡ್ವರ್ಡ್ರಾಣಿ ಎಂಬ ನಾಲ್ವರು ರಾಣಿಯ ಮಕ್ಕಳ ಹೆಸರು.