ಪುರೋಹಿತ ಕಸುಬು ಮಾಡಿಕೊಂಡಿದ್ದ ವೆಂಕಟೇಶ ಕಾರಂತ ಎಂಬಾತ ತನ್ನ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ ಪ್ರಕರಣದ ಅಡಿಯಲ್ಲಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಭಾಗದ ತುಂಬೆ ಎಂಬಲ್ಲಿ ಇಂತಹದ್ದೊಂದು ಪೈಶಾಚಿಕ ಕೃತ್ಯ ನಡೆದಿದೆ.
ವೆಂಕಟೇಶ್ ಕಾರಂತ ಎಂಬ ವ್ಯಕ್ತಿ ಸಂತ್ರಸ್ತ ಬಾಲಕಿಯ ಮಲತಂದೆ ಆಗಿದ್ದಾನೆ. ಬಾಲಕಿಯ ತಂದೆ ಅಪಘಾತದಲ್ಲಿ ಮೃತರಾದ ಹಿನ್ನೆಲೆಯಲ್ಲಿ ವೆಂಕಟೇಶ ಕಾರಂತ ಎಂಬ ಪುರೋಹಿತನನ್ನು ಬಾಲಕಿಯ ತಾಯಿ ವಿವಾಹವಾಗಿದ್ದಾರೆ. ಹಾಗಾಗಿ ತಾಯಿಯ ಆಸರೆಯಲ್ಲಿದ್ದ ಬಾಲಕಿಯನ್ನೂ ಎರಡನೇ ಮದುವೆಯ ನಂತರವೂ ತಾಯಿ ತನ್ನ ಜೊತೆಗೇ ಬಿಟ್ಟುಕೊಂಡಿದ್ದರು.
ಮಲತಂದೆ ವೆಂಕಟೇಶ ಕಾರಂತ ಅಪ್ರಾಪ್ತ ಬಾಲಕಿಯನ್ನು ನಿರಂತರ 4 ತಿಂಗಳುಗಳಿಂದಲೂ ಅತ್ಯಾಚಾರ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಸಹಜವಾಗಿ ಗರ್ಭವತಿಯಾದ ಹಿನ್ನೆಲೆಯಲ್ಲಿ ಮಲತಂದೆಯ ಇಂತಹ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
ಸಧ್ಯ ಅತ್ಯಾಚಾರಿ ತಂದೆ ವೆಂಕಟೇಶ ಕಾರಂತ ಬಂಟ್ವಾಳ ಪೊಲೀಸರ ಅತಿಥಿಯಾಗಿದ್ದಾನೆ. ಸಂಬಂಧಿಗಳು ಕೊಟ್ಟ ದೂರಿನ ಅನ್ವಯ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.