Home ಬ್ರೇಕಿಂಗ್ ಸುದ್ದಿ RCB ಕಾಲ್ತುಳಿತ ಕೇಸ್ ಈ ಬಾರಿ ದಸರಾದಲ್ಲಿ ಮಹತ್ವದ ಬದಲಾವಣೆ ?

RCB ಕಾಲ್ತುಳಿತ ಕೇಸ್ ಈ ಬಾರಿ ದಸರಾದಲ್ಲಿ ಮಹತ್ವದ ಬದಲಾವಣೆ ?

ಮೈಸೂರು : ದಸರಾದ (Mysore Dasara) ಜಂಬೂ ಸವಾರಿಯನ್ನು (Jambu Savari) ನೋಡುವುದೇ ಚೆಂದ. ಇಂತಹ ಅವಕಾಶಕ್ಕಾಗಿ ಎಲ್ಲರೂ ಕಾಯ್ತಾ ಇರ್ತಾರೆ. ಅದರಲ್ಲೂ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವುದನ್ನು ಕಣ್ತುಂಬಿಕೊಳ್ಳಲು ಸಿಎಂ, ಸಚಿವರು, ನ್ಯಾಯಾಧೀಶರು, ಗಣ್ಯರು ಸೇರಿದಂತೆ ವಿವಿಐಪಿಗಳು ಹಾಗೂ ವಿಐಪಿಗಳಿಗೆ ಅಂಬಾ ವಿಲಾಸ ಅರಮನೆಯ ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈ ಬಾರಿ ಅಂಬಾ ವಿಲಾಸ ಅರಮನೆಯ ಮುಂಭಾಗದ ಕುಳಿತು ಜಂಬೂ ಸವಾರಿ ನೋಡೋಣ ಎಂದವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.

ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಅವಘಡದಿಂದ ಎಚ್ಚೆತ್ತಿರುವ ಸಿದ್ದರಾಮಯ್ಯ ಸರ್ಕಾರ ದಸರಾದಲ್ಲೂ ಎಚ್ಚರಿಕೆ ಹೆಜ್ಜೆಯನ್ನಿಡುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಈ ಬಾರಿ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಕಲ್ಪಿಸುವಾಗ ವಿವಿಐಪಿ, ವಿಐಪಿ ಆಸನಗಳು ಸಹಿತ ಎಲ್ಲ ರೀತಿಯ ಪಾಸ್‌ಗಳ ಪ್ರಮಾಣ ಇಳಿಕೆಯಾಗಲಿದೆ. ಈ ಬಾರಿ ಆಸನಗಳ ಸಂಖ್ಯೆ ಕಡಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಮಿತಿ ಸಭೆ ತೀರ್ಮಾನಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಧ್ಯಕ್ಷತೆಯ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಚರ್ಚೆಯಾಗಿದ್ದು, 48 ಸಾವಿರ ಆಸನ ವ್ಯವಸ್ಥೆ ಮಾಡಲು, ಅಷ್ಟೇ ಪ್ರಮಾಣದಲ್ಲಿ ಪಾಸ್, ಟಿಕೆಟ್, ಕಾರ್ಡ್‌ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ, ವಿವಿಐಪಿ, ವಿಐಪಿಗಳಿಗೆ ಕೂಡ 1 ಸಾವಿರ ಆಸನ ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಪ್ರತಿ ವಿಭಾಗದಲ್ಲೂ ತಲಾ ಸರಾಸರಿ 500ರಿಂದ ಸಾವಿರ ಆಸನಗಳು ಕಡಿಮೆಯಾಗಲಿವೆ.

You cannot copy content of this page

Exit mobile version