Home ರಾಜಕೀಯ ಇಡಿ ವಿಚಾರಣೆಗೆ ಸಹಕರಿಸುವೆ, ಆದರೆ ಕೆಲವು ಷರತ್ತುಗಳಿವೆ ಎಂದ ಕೇಜ್ರಿವಾಲ್

ಇಡಿ ವಿಚಾರಣೆಗೆ ಸಹಕರಿಸುವೆ, ಆದರೆ ಕೆಲವು ಷರತ್ತುಗಳಿವೆ ಎಂದ ಕೇಜ್ರಿವಾಲ್

0

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗಲು ಮತ್ತೊಮ್ಮೆ ನಿರಾಕರಿಸಿದ್ದಾರೆ. ಆದರೆ, ಈಗ ಅವರು ಇಡಿ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿದ್ದಾರೆ. ಕೇಜ್ರಿವಾಲ್ ಇಂದು ಇಡಿಗೆ ತಮ್ಮ ಉತ್ತರವನ್ನು ಕಳುಹಿಸಿದ್ದಾರೆ ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಸಿದ್ಧ ಎಂದು ಹೇಳಿದ್ದಾರೆ.

ಇದಕ್ಕಾಗಿ ಮಾರ್ಚ್ 12ರ ನಂತರ ದಿನಾಂಕ ನೀಡುವಂತೆ ಇಡಿಯನ್ನು ಕೋರಿದ್ದಾರೆ.

ಮದ್ಯದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಕೇಜ್ರಿವಾಲ್‌ಗೆ ಮಾರ್ಚ್ 4ರಂದು ಹಾಜರಾಗುವಂತೆ ಇಡಿ ಫೆಬ್ರವರಿ 27ರಂದು 8 ನೇ ಸಮನ್ಸ್ ಕಳುಹಿಸಿತ್ತು. ಇಡಿ ಸಮನ್ಸ್‌ಗೆ ಕೇಜ್ರಿವಾಲ್ ಏಜೆನ್ಸಿಯ ಮುಂದೆ ಹಾಜರಾಗದಿರುವುದು ಇದು ಎಂಟನೇ ಬಾರಿ. ಕೇಜ್ರಿವಾಲ್ ಇದುವರೆಗೆ ಇಡಿ ಮುಂದೆ ಒಂದೇ ಒಂದು ಸಮನ್ಸ್‌ಗೆ ಹಾಜರಾಗಿಲ್ಲ. ಪ್ರತಿ ಬಾರಿಯೂ ಅವರು ಈ ಸಮನ್ಸ್‌ಗಳನ್ನು ‘ಅಕ್ರಮ’ ಎಂದು ಘೋಷಿಸಿದ್ದಾರೆ. ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯಕ್ಕೂ ಪತ್ರ ಬರೆದು ಸಮನ್ಸ್ ಹಿಂಪಡೆಯುವಂತೆ ಒತ್ತಾಯಿಸಿದ್ದರು.

ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಕಾರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯಕ್ಕೆ ಉತ್ತರವನ್ನು ಕಳುಹಿಸಿದ್ದಾರೆ. ಸಮನ್ಸ್ ಕಾನೂನು ಬಾಹಿರವಾಗಿದೆ ಎಂದ ಅವರು, ಆದರೂ ಉತ್ತರಿಸಲು ಸಿದ್ಧ ಎಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಇಡಿಯಿಂದ ಮಾರ್ಚ್ 12ರ ನಂತರ ದಿನಾಂಕವನ್ನು ಕೇಳಿದ್ದಾರೆ. ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿರುವುದಾಗಿ ಹೇಳಿದ್ದಾರೆ.

ಈ ಹಿಂದೆ, ಫೆಬ್ರವರಿ 22ರಂದು ಇಡಿ ಕಳುಹಿಸಿದ ಏಳನೇ ನೋಟಿಸನ್ನು ಕೇಜ್ರಿವಾಲ್ ನಿರ್ಲಕ್ಷಿಸಿದ್ದರು ಮತ್ತು ನ್ಯಾಯಾಲಯದ ತೀರ್ಪಿಗಾಗಿ ಕಾಯುವಂತೆ ಸಲಹೆ ನೀಡಿದ್ದರು. ಈ ಕುರಿತು ನ್ಯಾಯಾಲಯ ಆದೇಶ ನೀಡಿದರೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವುದಾಗಿ ಹೇಳಿದ್ದರು.

ಮದ್ಯ ಹಗರಣದಲ್ಲಿ ಹಲವು ಬಾರಿ ವಿಚಾರಣೆಗೆ ಸಮನ್ಸ್ ನೀಡಿದರೂ ಕೇಜ್ರಿವಾಲ್ ಹಾಜರಾಗದಿರುವ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಾಗಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಮಾರ್ಚ್ 16ರಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ನ್ಯಾಯಾಲಯ ಸೂಚಿಸಿದೆ.

You cannot copy content of this page

Exit mobile version