Home ದೆಹಲಿ ಸ್ವತಂತ್ರ ಭಾರದ್ವಾಜ್ ವಿಷಯದಲ್ಲಿ ಬಿಜೆಪಿ ಎರಡು ಹೆಡೆಯ ಹಾವಿನಂತೆ ವರ್ತಿಸಿದೆ: ಆಪ್‌ ನಾಯಕ ಸೌರಭ್ ಭಾರದ್ವಾಜ್

ಸ್ವತಂತ್ರ ಭಾರದ್ವಾಜ್ ವಿಷಯದಲ್ಲಿ ಬಿಜೆಪಿ ಎರಡು ಹೆಡೆಯ ಹಾವಿನಂತೆ ವರ್ತಿಸಿದೆ: ಆಪ್‌ ನಾಯಕ ಸೌರಭ್ ಭಾರದ್ವಾಜ್

0

ಹೊಸದೆಹಲಿ: ಸ್ವತಂತ್ರ ಭಾರದ್ವಾಜ್ ಬಂಧನದ ವಿಚಾರದಲ್ಲಿ ಭಾರತೀಯ ಜನತಾ ಪಕ್ಷವನ್ನು ‘ಎರಡು ಹೆಡೆಯ ಹಾವು’ ಎಂದು ಆಮ್ ಆದ್ಮಿ ಪಕ್ಷದ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಡೀ ಕೇಂದ್ರ ಸರ್ಕಾರವೇ ಆರೋಪಿ ಸ್ವತಂತ್ರ ಕುಮಾರ್‌ನನ್ನು ರಕ್ಷಿಸಲು ಕಾನೂನುಬಾಹಿರವಾಗಿ ಬೆಂಬಲಕ್ಕೆ ನಿಂತಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಪೊಲೀಸರ ಡಿಸಿಪಿ ಸಚಿನ್ ಶರ್ಮಾ ಅವರು ಸ್ವತಂತ್ರ ಭಾರದ್ವಾಜ್ ಮೇಲೆ ಕೇವಲ ಸಣ್ಣಪುಟ್ಟ ದುರ್ಬಲ ಸೆಕ್ಷನ್‌ಗಳನ್ನು ಹಾಕಿ ಪ್ರಕರಣ ದಾಖಲಿಸಲು ಸಕಲ ಪ್ರಯತ್ನ ನಡೆಸಿದ್ದರು; ಆ ಮೂಲಕ ಆತ ಎಂದಿಗೂ ಜೈಲಿಗೆ ಹೋಗದಂತೆ ಕಾಪಾಡುವುದು ಅವರ ಉದ್ದೇಶವಾಗಿತ್ತು ಎಂದು ಭಾರದ್ವಾಜ್ ದೂರಿದ್ದಾರೆ. ಆದರೆ ಯಾವಾಗ ‘ಕಾಕ್ರೋಚ್ ಮೂವ್‌ಮೆಂಟ್’ ಪ್ರತಿಭಟನಾಕಾರರು ಸಂಸತ್ ಮಾರ್ಗಕ್ಕೆ ತಲುಪಿ ತೀವ್ರ ಆಕ್ರೋಶ ಹೊರಹಾಕಿದರೋ, ಆಗ ಸರ್ಕಾರಕ್ಕೆ ಮುಂದೆ ಬಂದು ಸ್ವತಂತ್ರ ಭಾರದ್ವಾಜ್ ಪರ ನಿಲ್ಲುವ ಧೈರ್ಯವೂ ಇಲ್ಲದಂತಾಯಿತು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಚಿರಾಗ್ ಪಾಸ್ವಾನ್ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ರಾಜಕೀಯ ಗಾಳಿ ಎತ್ತ ಬೀಸುತ್ತಿದೆ ಎಂಬುದನ್ನು ಮೊದಲೇ ಗ್ರಹಿಸುವ ವಿಶಿಷ್ಟ ಕಲೆಯಿತ್ತು; ಇದೀಗ ಮಗನಿಗೂ ಅದೇ ಗುಣ ಬಂದಿದೆ. ದೇಶದಲ್ಲಿ ಬಿಜೆಪಿಯ ವಿರುದ್ಧವಾಗಿ ಗಾಳಿ ಬೀಸುತ್ತಿರುವುದು ಈಗ ಚಿರಾಗ್ ಅವರಿಗೂ ಅರ್ಥವಾಗಿದೆ. ಹಾಗಾಗಿಯೇ ಅವರ ಹೇಳಿಕೆಗಳ ದಿಕ್ಕು ಕೂಡ ಈಗ ವಿರುದ್ಧ ದಿಕ್ಕಿನತ್ತ ಬದಲಾಗತೊಡಗಿದೆ” ಎಂದು ವ್ಯಂಗ್ಯವಾಡಿದ್ದಾರೆ.

You cannot copy content of this page

Exit mobile version