Home ದೆಹಲಿ ಸ್ಕಿಲ್ ಇಂಡಿಯಾದಲ್ಲಿ ಗೋಲ್‌ಮಾಲ್!: 2022ರ ವೇಳೆಗೆ 50 ಕೋಟಿ ಜನರಿಗೆ ಕೌಶಲ್ಯಾಭಿವೃದ್ಧಿಯ ಗುರಿ, ತರಬೇತಿ ನೀಡಿದ್ದು...

ಸ್ಕಿಲ್ ಇಂಡಿಯಾದಲ್ಲಿ ಗೋಲ್‌ಮಾಲ್!: 2022ರ ವೇಳೆಗೆ 50 ಕೋಟಿ ಜನರಿಗೆ ಕೌಶಲ್ಯಾಭಿವೃದ್ಧಿಯ ಗುರಿ, ತರಬೇತಿ ನೀಡಿದ್ದು ಕೇವಲ ಒಂದು ಕೋಟಿ ಜನರಿಗೆ

0

2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರದ ಮೋದಿ ಸರ್ಕಾರವು ಹಲವಾರು ಯೋಜನೆಗಳನ್ನು ಆರಂಭಿಸಿದೆ. ಆದರೆ, ಆರಂಭಿಸಿದ ಪ್ರತಿಯೊಂದು ಯೋಜನೆಯೂ ಸಂಪೂರ್ಣವಾಗಿ ವಿಫಲವಾಗುತ್ತಿದೆ.

ಈ ಸಾಲಿಗೆ 2015ರಲ್ಲಿ ಆರಂಭಿಸಲಾದ ‘ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ’ (PMKVY – ಸ್ಕಿಲ್ ಇಂಡಿಯಾ ಮಿಷನ್) ಕೂಡ ಸೇರಿದೆ. 2022ರ ವೇಳೆಗೆ 50 ಕೋಟಿ ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ಧಿಯೊಂದಿಗೆ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ತರಲಾಗಿತ್ತು.

ನಿಗದಿತ ಸಮಯ ಮುಗಿದು ಮೂರು ವರ್ಷಗಳು ಕಳೆದಿದ್ದರೂ, ಮೋದಿ ಅವರ ‘ಸ್ಕಿಲ್ ಇಂಡಿಯಾ’ ಯೋಜನೆ ಮಾತ್ರ ಗುರಿಯನ್ನು ತಲುಪಿಲ್ಲ. ಯೋಜನೆಯ ಪ್ರಕಾರ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ಕನಿಷ್ಠ 50 ಕೋಟಿ ಜನರಿಗೆ ತರಬೇತಿ ನೀಡಬೇಕಿತ್ತು. ಆದರೆ, ಈವರೆಗೆ ಕೇವಲ 1.32 ಕೋಟಿ ಜನರಿಗೆ ಮಾತ್ರ ತರಬೇತಿ ನೀಡಲಾಗಿದೆ.

ಇವರಲ್ಲಿ 1.1 ಕೋಟಿ ಜನರು ಮಾತ್ರ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದಾರೆ. ಅಂದರೆ, ಯೋಜನೆಯ ಯಶಸ್ಸಿನ ಪ್ರಮಾಣ ಕೇವಲ ಶೇಕಡಾ 2 ಎಂದು ಹೇಳಬಹುದು.

10 ಸಾವಿರ ಕೋಟಿ ನಿಧಿ ಏನಾಯಿತು? ಅಟ್ಟರ್ ಫ್ಲಾಪ್ ಆಗಿರುವ ಈ ‘ಸ್ಕಿಲ್ ಇಂಡಿಯಾ’ ಯೋಜನೆಗಾಗಿ ಕೇಂದ್ರ ಸರ್ಕಾರವು 10,194 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಸಿಎಜಿ (CAG) ವರದಿಯ ಪ್ರಕಾರ, ಅಭ್ಯರ್ಥಿಗಳಿಗೆ ತರಬೇತಿಯನ್ನೇ ನೀಡದೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಯಾವುದಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ‘ಸ್ಕಿಲ್ ಇಂಡಿಯಾ’ ಯೋಜನೆಯಲ್ಲಿ ದೊಡ್ಡ ಮಟ್ಟದ ಗೋಲ್‌ಮಾಲ್ ನಡೆದಿದೆಯೇ? ಎಂದು ಸರ್ಕಾರವನ್ನು ಕೇಳುತ್ತಿದ್ದಾರೆ.

You cannot copy content of this page

Exit mobile version