Home ಬ್ರೇಕಿಂಗ್ ಸುದ್ದಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನಕ್ಕೆ

ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನಕ್ಕೆ

0
ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಶ್ರೀ ಮುರುಘಾ ಮಠದ ಮಠಾಧೀಶರಾಗಿದ್ದ ಶಿವಮೂರ್ತಿಯವರ ಪೊಲೀಸ್‌ ಕಸ್ಟಡಿ ಇಂದು ಮುಕ್ತಾಯಗೊಂಡಿದೆ. ನಾಲ್ಕು ದಿನಗಳ ಹಿಂದೆ ವಿಚಾರಣೆಗೆಂದು ಅವರನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಇಂದು ಅವರನ್ನು ಚಿತ್ರದುರ್ಗ ಜಿಲ್ಲಾ 2 ನೇ ಸೆಶನ್ಸ್‌ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. 

ಮುರುಘಾ ಶರಣರ ಪೊಲೀಸ್ ವಿಚಾರಣೆ ಅವಧಿ ಕೊನೆಯಾದ ಕಾರಣ ನ್ಯಾ. ಕೋಮಲ ಅವರು ಆರೋಪಿ ಶಿವಮೂರ್ತಿಯವರ ನ್ಯಾಯಾಂಗ ಬಂಧನವನ್ನು ಮತ್ತೆ 9 ದಿನಗಳ ಅವಧಿಗೆ ವಿಸ್ತರಿಸಿ ಆದೇಶ ನೀಡಿದ್ದಾರೆ. ಆರೋಪಿ ಶಿವಮೂರ್ತಿಯವರ ಜಾಮೀನು ಅರ್ಜಿ ವಿಚಾರಣೆಯು ನ್ಯಾಯಾಧೀಶರ ಎದುರು ಸೆ. 7 ಕ್ಕೆ ಬರಲಿದೆ.

You cannot copy content of this page

Exit mobile version