ಹಾಸನ : ಹಾಸನ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶುಭನ್ವಿತಾ ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಂದು ಎಎಸ್‌ಪಿ ತಮ್ಮಯ್ಯ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ. ಬಳಿಕ ನೂತನ ಎಸ್‌ಪಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಮೊದಲು ಎಸ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಮ್ಮದ್ ಸುಜೀತಾ ಅವರು ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಲು ಬೆಂಗಳೂರಿಗೆ ತೆರಳಿದ್ದರು. ಹಾಗಾಗಿ ಅವರ ಚಾರ್ಜ್ ಅನ್ನು ಎಎಸ್‌ಪಿ ತಮ್ಮಯ್ಯ ಅವರಿಗೆ ಚಾರ್ಜ್ ಕೊಟ್ಟು ತೆರಳಿದ್ದರು.ಇನ್ನೂ ಜಿಲ್ಲಾ ಪೊಲೀಸ್ ತಂಡ ಗೌರವ ವಂದನೆ ಸಲ್ಲಿಸಿದ್ದು, ಅಧಿಕಾರಿಗಳು ನೂತನ ಎಸ್‌ಪಿ ಅವರಿಗೆ ಹೂಗುಚ್ಛ ಕೊಟ್ಟು ಸ್ವಾಗತ ಕೋರಿದ್ದಾರೆ.
