ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳನ್ನು ಕೊಲೆ ಎಂದು ಪರಿಗಣಿಸಿ ಎಫ್ಐಆರ್ ದಾಖಲಿಸಿಕೊಳ್ಳಿ ಎಂದು ಧರ್ಮಸ್ಥಳದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಎಸ್ಐಟಿ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಪ್ರಾರಂಭಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬುರುಡೆ ಕೇಸ್ ಎಲ್ಲಾ ಆಯಾಮದಲ್ಲೂ ಎಸ್‌ಐಟಿ ಇದೀಗ ತನಿಖೆ ಮಾಡುತ್ತಿದೆ. ಬುರುಡೆ ಕೇಸಿನ ಜೊತೆಗೆ ಹಿಂದಿನ ಕೇಸ್ ಗಳ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದ್ದು ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶವಗಳ ದಫನ್ ಬಗ್ಗೆ ಹೇಳಲಾಗಿದೆ ಈ ಬಗ್ಗೆ ಆರೋಪ ಕೇಳಿಬಂದಿದ್ದು ಸುಳ್ಳು ದಾಖಲೆ ಸೃಷ್ಟಿ ಎಂದು ಮಟ್ಟಣ್ಣನವರ್ ಆರೋಪಿಸಿದ್ದು, ಹೆಣಗಳನ್ನು ಫೋರ್ಜರಿ ದಾಖಲೆ ಸೃಷ್ಟಿಸಲಾಗಿದೆ ಎಂದು ಗಿರೀಶ್ ಮಟ್ಟಣ್ಣನವರ್ ಗಂಭೀರವಾದ ಆರೋಪ ಮಾಡಿದ್ದರು.
ಶವ ಕೂತು ಹಾಕಿರುವ ಬಗ್ಗೆ ಎಸ್‌ಐಟಿ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರತಿನಿತ್ಯವೂ ದಾಖಲೆಗಳನ್ನು ಧರಿಸಿಕೊಳ್ಳುತ್ತಿದೆ. ಧರ್ಮಸ್ಥಳ ಗ್ರಾಮ್ ಪಂಚಾಯ್ತಿಯಿಂದ ದಾಖಲೆ ಸಂಗ್ರಹಿಸುತ್ತಿದ್ದು ಶವ ಹೂತು ಹಾಕಿದ ವಿವರ ಹಾಗೂ ಈ ವಿಡಿಯೋ ಬಗ್ಗೆ ದಾಖಲೆ ಸಂಗ್ರಹಿಸುತ್ತಿದೆ. ಹಳೆ ದಾಖಲೆಗಳನ್ನು ತನಿಖಾಧಿಕಾರಿಗಳು ಕೆದಕುತ್ತಿದ್ದಾರೆ.
ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ 2012 ರ ವರೆಗೆ ಸಂಶಯಾಸ್ಪದ ಸಾವುಗಳು, ಧರ್ಮಸ್ಥಳದ ವಸತಿ ಗ್ರಹಗಳಲ್ಲಾದ ಸಂಶಯಸ್ಪದ ಸಾವುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಸೂಚಿಸಲಾಗಿದೆ.