Home ಬ್ರೇಕಿಂಗ್ ಸುದ್ದಿ ಧರ್ಮಸ್ಥಳ : ಶವಗಳನ್ನು ಹೂತಿಟ್ಟ ಜಾಗಕ್ಕೆ ದೂರುದಾರನ ಸಮೇತ ಪರಿಶೀಲನೆ ಶುರು ಮಾಡಿದ ಎಸ್ಐಟಿ ತಂಡ

ಧರ್ಮಸ್ಥಳ : ಶವಗಳನ್ನು ಹೂತಿಟ್ಟ ಜಾಗಕ್ಕೆ ದೂರುದಾರನ ಸಮೇತ ಪರಿಶೀಲನೆ ಶುರು ಮಾಡಿದ ಎಸ್ಐಟಿ ತಂಡ

0

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಿಸಿದ ಎಸ್‌ಐಟಿ ತಂಡ ಇದಂದು ನೇತ್ರಾವತಿ ನದಿಯ ತಟದಲ್ಲಿ ಸ್ಥಳ ಮಹಜರು ಆರಂಭಿಸಿದೆ. ಶವ ಹೂತಿಟ್ಟಿದ್ದೆ ಎಂದ ದೂರುದಾರನನ್ನು ಕರೆದುಕೊಂಡು ಎಸ್ಐಟಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಎಸ್‌ಐಟಿ ತಂಡವು ಫೊರೆನ್ಸಿಕ್ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸ್ಥಳ ಮಹಜರು ಆರಂಭಿಸಿದ್ದಾರೆ.

ಪೊಲೀಸ್ ಬಿಗಿ ಭದ್ರತೆಯಲ್ಲಿ ಎಸ್‌ಐಟಿ ಎಸ್ಪಿ ಸಿ.ಎ.ಸೈಮನ್ ಅವರ ನೇತೃತ್ವದಲ್ಲಿ ದೂರುದಾರನನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಸ್ಥಳ ಮಹಜರು ಕಾರ್ಯ ಆರಂಭವಾಗಿದೆ. ಅನಾಮಿಕ ದೂರುದಾರ ಸೂಚಿಸಿದ ಜಾಗಗಳನ್ನು ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ.

ಇಂದಿನಿಂದ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಿಂದ ಕಾರ್ಯಾಚರಣೆ ನಡೆಸಲಿದ್ದು. ದೂರುದಾರನ ಹೇಳಿಕೆ ಆಧಾರದ ಮೇಲೆ ಪ್ರಣವ್ ಮೊಹಂತಿ ತಂಡ ತನಿಖೆ ಚುರುಕುಗೊಳಿಸಲಿದ್ದಾರೆ.

ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್, ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಸೇರಿ ಇನ್ನಿತರರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಯುತ್ತಿದೆ.

You cannot copy content of this page

Exit mobile version