Home ಬ್ರೇಕಿಂಗ್ ಸುದ್ದಿ ಸಕಲೇಶಪುರದ ಬೀದಿ ನಾಯಿಗಳ ಅಟ್ಟಹಾಸ, ಜನರ ಜೀವಕ್ಕೆ ಆತಂಕ

ಸಕಲೇಶಪುರದ ಬೀದಿ ನಾಯಿಗಳ ಅಟ್ಟಹಾಸ, ಜನರ ಜೀವಕ್ಕೆ ಆತಂಕ

ಹಾಸನ : ಸಕಲೇಶಪುರ ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿ ಶುಕ್ರವಾರ ಸಂಜೆ ಮತ್ತೊಂದು ಭಯಾನಕ ಘಟನೆ ನಡೆದಿದೆ. ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.ಬಾಲಕ ಶಾಹಿದ್‌(18) ಮುಖ, ಕೈ, ಕಾಲು, ಹೊಟ್ಟೆ ಭಾಗಗಳಿಗೆ ನಾಯಿಗಳು ಕಚ್ಚಿದ್ದು, ಭಾರೀ ರಕ್ತಸ್ರಾವವಾಗಿದೆ. ತಕ್ಷಣ ಸ್ಥಳೀಯರು ಓಡಿ ಬಂದು ಶ್ವಾನಗಳಿಂದ ಬಾಲಕನನ್ನು ರಕ್ಷಿಸಿದ್ದು, ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಕಲೇಶಪುರ ಪಟ್ಟಣದ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಜನರು ಹಲವು ಬಾರಿ ಪುರಸಭೆಗೆ ದೂರು ನೀಡಿದರೂ, ಅದನ್ನು ಗಂಭೀರವಾಗಿ ಪರಿಗಣಿಸದ ಕ್ರೂರ ಮನಸ್ಥಿತಿಯ ಆಡಳಿತವನ್ನು ಸ್ಥಳೀಯರು ತೀವ್ರವಾಗಿ ಶಾಪಹಾಕುತ್ತಿದ್ದಾರೆ. “ಈ ಪುರಸಭೆಯ ನಿರ್ಲಕ್ಷ್ಯದಿಂದ ಮುಂದೆ ಇಂಥಹ ಅನೇಕ ದುರ್ಘಟನೆಗಳಿಗೆ ಕಾರಣವಾಗಲಿದೆ,” ಎಂಬುದು ಜನತೆಯ ಆತಂಕವಾಗಿದೆ.

ಪುರಸಭೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಗಳ ಮೂಲಕ, ಸರಿಯಾದ ಮಾರ್ಗಕ್ಕೆ ತಂದು ಬೀದಿ ನಾಯಿಗಳಂತಹ ಹೀನಾಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈಗ ಅಗತ್ಯವಾಗಿದೆ.

You cannot copy content of this page

Exit mobile version