ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಭಯೋತ್ಪಾಕರ ಸಹೋದರಿ’ ಎಂದು ಕರೆದ ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಷಾ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹಾಗೂ ಈ ಕೂಡಲೇ ಈ ಪ್ರಕರಣದ ಅಡಿಯಲ್ಲಿ ತನಿಖೆ ಕೈಗೊಳ್ಳಲು ಎಸ್ಐಟಿ ರಚಿಸಿದೆ.
ಅದಕ್ಕೂ ಮೊದಲು ನ್ಯಾಯಾಲಯದ ಎದುರು ಪ್ರಕರಣಕ್ಕೆ ಕ್ಷಮೆ ಕೋರಿದ್ದ ಕುನ್ವರ್ ವಿಜಯ್ ಷಾಗೆ ನ್ಯಾಯಮೂರ್ತಿ ತೀವ್ರ ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯವು ಶಾ ಅವರ ಕ್ಷಮೆಯಾಚನೆಯನ್ನು ತಿರಸ್ಕರಿಸಿತು ಮತ್ತು “ನಿಮ್ಮದು ಯಾವ ರೀತಿಯ ಕ್ಷಮೆಯಾಚನೆ?” ಎಂದು ಕೇಳಿತು.
“ನೀವು ಸಾರ್ವಜನಿಕ ವ್ಯಕ್ತಿ. ಅನುಭವಿ ರಾಜಕಾರಣಿ. ನೀವು ಮಾತನಾಡುವಾಗ ನಿಮ್ಮ ಮಾತುಗಳ ಬಗ್ಗೆ ಎಚ್ಚರವಾಗಿರಬೇಕು. ನಾವು ನಿಮ್ಮ ವೀಡಿಯೊವನ್ನು ಇಲ್ಲಿ ಪ್ರದರ್ಶಿಸಬೇಕು… ಇದು ಸಶಸ್ತ್ರ ಪಡೆಗಳಿಗೆ ಒಂದು ಪ್ರಮುಖ ವಿಷಯವಾಗಿದೆ. ನಾವು ತುಂಬಾ ಜವಾಬ್ದಾರಿಯುತವಾಗಿ ಇರಬೇಕು” ಎಂದು ನ್ಯಾಯಾಲಯ ಹೇಳಿದೆ